ADVERTISEMENT

ಆಲಿಂಗನಕ್ಕೆ ಬಂದಿದೆ ಕಡ್ಲರ್‌ ಆ್ಯಪ್

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST
ಆಲಿಂಗನಕ್ಕೆ ಬಂದಿದೆ ಕಡ್ಲರ್‌ ಆ್ಯಪ್
ಆಲಿಂಗನಕ್ಕೆ ಬಂದಿದೆ ಕಡ್ಲರ್‌ ಆ್ಯಪ್   

ನಿಜಕ್ಕೂ ಇದೊಂದು ಕೀಟಲೆ ಸ್ವಭಾವದ, ಅಷ್ಟೇ ಆಸಕ್ತಿದಾಯಕವಾದ ಅಪ್ಲಿಕೇಷನ್‌. ಈ ಆ್ಯಪ್‌ ಅದೆಷ್ಟು ಆಸಕ್ತಿದಾಯಕ ಎಂದರೆ, ಇದರ ಪರಿಣಾಮವಾಗಿ ಎದುರಿಗಿದ್ದವರನ್ನು ತಕ್ಷಣವೇ ಆಲಂಗಿಸಿಬಿಡೋಣ ಎಂಬಷ್ಟು!

ಅಪರಿಚಿತರೊಂದಿಗೆ ಡೇಟಿಂಗ್‌ ನಡೆಸಲು ಅಪ್ಲಿಕೇಷನ್‌ ಇರುವಂತೆಯೇ ಇದೀಗ ಅಪರಿಚಿತರ ಆಲಿಂಗನಕ್ಕೊಂದು ವಿಶಿಷ್ಟ ಆ್ಯಪ್‌ ತಯಾರಾಗಿದೆ. ಚಾರ್ಲಿ ವಿಲಿಯಮ್ಸ್ ಎಂಬವರು ಇದನ್ನು ಅಭಿವೃದ್ಧಿಪಡಿಸಿದ್ದಾರೆ.

ಮೊಬೈಲ್‌ ಫೋನ್‌ನಲ್ಲಿ  ಈ ಆ್ಯಪ್‌ ಅಳವಡಿಸಿಕೊಂಡು ಇತರರನ್ನು ಆಲಂಗಿಸಿಕೊಳ್ಳಲು ಶುರು ಮಾಡಬಹುದು. Cuddlr ಎಂಬ ಪದದ ಅರ್ಥ ತೋಳ ತೆಕ್ಕೆಯಲ್ಲಿ ಬಂಧಿಯಾಗು, ಆಲಂಗಿಸು ಎಂಬುದೇ ಆಗಿದೆ.

ವಿಲಿಯಮ್ಸ್ ಹೇಳುವಂತೆ  ಈ  ಆ್ಯಪ್ ಹೊಂದಿರುವವರಲ್ಲಿ ನಮ್ಮ ಸುತ್ತಮುತ್ತ ಯಾರು ಆಲಂಗಿಸಲು ಆಸಕ್ತರಾಗಿದ್ದರೋ ಅವರ ಮಾಹಿತಿ ನೀಡುತ್ತದೆ. ಇದರಿಂದ ಅವರಿಗೆ ರಿಕ್ವೆಸ್ಟ್ ಕಳುಹಿಸಿ ಜೊತೆಗಾರರನ್ನಾಗಿ ಮಾಡಿಕೊಂಡು ಅವರ ತೋಳತೆಕ್ಕೆಯ ಬಂಧನಕ್ಕೆ ಒಳಗಾಗಬಹುದು, ಇಲ್ಲವೇ ಅವರನ್ನೇ ನಿಮ್ಮ ತೋಳ ತೆಕ್ಕೆಯಲ್ಲಿ ಬಂಧಿಸಬಹುದು.

ಎರಡೂ ಕಡೆಯ ವ್ಯಕ್ತಿಗಳು ಒಪ್ಪಿದ ನಂತರವಷ್ಟೇ ಪರಸ್ಪರ  ಆಲಂಗಿಸಲು ಸಾಧ್ಯ. ಈ ಆ್ಯಪ್‌ನ ಬಳಕೆದಾರರಿಗೆ ಈಗಾಗಲೇ ಇತರರು ಎಷ್ಟು ಯಶಸ್ವಿ ಜೊತೆಗಾರರನ್ನು ಅಂದರೆ ಆಲಿಂಗನ ಗೆಳೆಯ ಗೆಳತಿಯರು ಇದ್ದಾರೆ ಎಂಬುದನ್ನೂ ತೋರಿಸುತ್ತದೆಯಂತೆ.
ಸದ್ಯಕ್ಕೆ ಐಫೋನ್‌ ಬಳಕೆದಾರರು ಮಾತ್ರ ಈ ಆ್ಯಪ್‌ ಮೂಲಕ ಮಾತ್ರ ಆಲಿಂಗನ ಹೊಂದಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.