ADVERTISEMENT

ದೇಶಿ ಮಾರುಕಟ್ಟೆಗೆ ಪೋಲರಾಯ್ಡ್ ಕ್ಯಾಮೆರಾ

ಸುಮಲತಾ ಎನ್, ಪದ್ಮನಾಭ ಭಟ್ಟ
Published 24 ನವೆಂಬರ್ 2015, 19:34 IST
Last Updated 24 ನವೆಂಬರ್ 2015, 19:34 IST

ಕ್ರಿಯಾತ್ಮಕ ಹಾಗೂ ಇನ್‌ಸ್ಟಂಟ್‌ ಕ್ಯಾಮೆರಾ ತಯಾರಿಕೆಗೆ ಹೆಸರಾಗಿರುವ ಪೋಲರಾಯ್ಡ್‌, ಇದೀಗ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಯುವಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಪೋಲರಾಯ್ಡ್ ಕ್ಯೂಬ್, ಕ್ಯೂಬ್ ಪ್ಲಸ್ ಪೋಲರಾಯ್ಡ್ ಜಿಪ್‌ ಪ್ರಿಂಟರ್‌ಗಳನ್ನು ಪರಿಚಯಿಸಿದೆ.

‘ಆಕ್ಷನ್ ಕ್ಯಾಮೆರಾಗಳ ಮಾರುಕಟ್ಟೆ ಅತಿ ವೇಗವಾಗಿ ಬೆಳೆಯುತ್ತಿದ್ದು, ಇದಕ್ಕೆ ಸ್ಪಂದಿಸುವಂತೆ ಕಾಂಪಾಕ್ಟ್‌ ಆಕ್ಷನ್‌ ಕ್ಯಾಮೆರಾಗಳನ್ನು ಪರಿಚಯಿಸಲಾಗಿದೆ. ಕ್ರೀಡೆ, ಸಾಹಸ, ಹೀಗೆ ಹಲವು ಉದ್ದೇಶಗಳಿಗೆ ಈ ಕ್ಯಾಮೆರಾಗಳು ಸಹಾಯಕವಾಗಲಿವೆ. ನೋಡಲು ಸುಂದರವಾಗಿದ್ದು, ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು’ ಎಂದು  ಭಾರತದಲ್ಲಿ ಪೋಲರಾಯ್ಡ್‌ಗೆ ಅಧೀಕೃತ ಪರವಾನಗಿ ಪಡೆದಿರುವ ರೆಗಾಲಿಕ್ಸ್ ಇಂಡಿಯಾ ಪ್ರೈ.ಲಿಮಿಟೆಡ್‌ನ ಗ್ರಾಹಕ ಸೇವಾ ವಿಭಾಗದ ಉಪಾಧ್ಯಕ್ಷ ಶ್ರೀಧರನ್ ನಾರಾಯಣ್ ಅವರು ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಪೋಲರಾಯ್ಡ್ ಕ್ಯೂಬ್ ಲೈಫ್‌ಸ್ಟೈಲ್ ಆ್ಯಕ್ಷನ್ ವಿಡಿಯೊ ಕ್ಯಾಮೆರಾದಲ್ಲಿ 6 ಎಂಪಿ ಫೋಟೊ ಹಾಗೂ 1080p/720p ರೆಸಲ್ಯೂಷನ್‌ನ ವಿಡಿಯೊ ರೆಕಾರ್ಡಿಂಗ್ ಸಾಧ್ಯವಿದೆ. 90 ನಿಮಿಷದ ಚಿತ್ರೀಕರಣ ಮಾಡಬಹುದು. 124 ಡಿಗ್ರಿ ಆ್ಯಂಗಲ್ ಲೆನ್ಸ್, ವೆದರ್ ಪ್ರೂಫ್, ಸ್ಪ್ಲಾಷ್ ಪ್ರೂಫ್, ಶಾಕ್ ಪ್ರೂಫ್ ಇದರ ಇನ್ನಿತರ ವಿಶೇಷತೆ. 1920x1080, 1280x720 ವಿಡಿಯೊ ರೆಸಲ್ಯೂಷನ್‌, 32 ಜಿಬಿ ಸಾಮರ್ಥ್ಯದ ಮೈಕ್ರೊ ಎಸ್‌ಡಿ ಕಾರ್ಡ್  ಇದೆ. ಇದರ ಬೆನ್ನಲ್ಲೇ ಪೋಲರಾಯ್ಡ್‌ ಕ್ಯೂಬ್‌ ಪ್ಲಸ್‌ ಅನ್ನೂ ಬಿಡುಗಡೆಗೊಳಿಸಿದ್ದು, ಇದು ವೈಫೈ ಬೆಂಬಲಿತ. ಸ್ಮಾರ್ಟ್‌ಫೋನ್ ಮೂಲಕ ಇದನ್ನು ನಿಯಂತ್ರಿಸಬಹುದು.

ಪೋಲರಾಯ್ಡ್ ಜಿಪ್ ಮೊಬೈಲ್ ಪ್ರಿಂಟರ್‌ನಲ್ಲಿ ಮೊಬೈಲ್, ಟ್ಯಾಬ್ಲೆಟ್‌ನಿಂದ ಬ್ಲೂಟೂಥ್ ಅಥವಾ ಎನ್‌ಎಫ್‌ಸಿ ತಂತ್ರಜ್ಞಾನದ ಮೂಲಕ  ನೇರವಾಗಿ ಚಿತ್ರ  ಮುದ್ರಿಸಬಹುದು. ಐಒಎಸ್‌ ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ಹೊಂದಿಕೊಳ್ಳುವ ಈ ಸಾಧನದಿಂದ ಒಂದು ನಿಮಿಷದೊಳಗೆ 2’’x3’’ ಗಾತ್ರದ ಪ್ರಿಂಟ್ ತೆಗೆಯಬಹುದು. 186 ಗ್ರಾಂ ತೂಕ ಇದ್ದು, 500mah ಲೀಥಿಯಂ ಪಾಲಿಮರ್ ಬ್ಯಾಟರಿ ಹೊಂದಿದೆ. ಇಂಕ್‌ಲೆಸ್‌ ಆದ ಹತ್ತು ಝಿಂಕ್ ಪೇಪರ್‌ಗಳನ್ನು ಇದರೊಂದಿಗೆ ನೀಡಲಾಗುತ್ತದೆ. ಪ್ರತಿ ಚಾರ್ಜ್‌ಗೆ 25 ಪ್ರಿಂಟ್ ತೆಗೆಯಬಹುದು. 

ಕ್ಯಾಮೆರಾ ಮಾತ್ರವಲ್ಲದೆ ಪೋಲರಾಯ್ಡ್ ಕ್ಯೂಬ್ ಅಕ್ಸೆಸರಿಗಳನ್ನೂ ಕಂಪೆನಿ ಬಿಡುಗಡೆ ಮಾಡಿದೆ.  ಮ್ಯಾಗ್ನೆಟಿಕ್ ಬೇಸ್ ಹೊಂದಿರುವ ಬಂಪರ್‌ ಕೇಸ್, ಹೆಲ್ಮೆಟ್‌ ಮೌಂಟ್, ಮಂಕಿ ಸ್ಟ್ಯಾಂಡ್, ವಾಟರ್‌ಪ್ರೂಫ್ ಕೇಸ್‌, ಬೈಕ್ ಮೌಂಟ್, ಟ್ರೈಪಾಡ್ ಮೌಂಟ್, ಸ್ಟ್ರಾಪ್ ಮೌಂಟ್‌ಗಳು ಸದ್ಯಕ್ಕೆ ಲಭ್ಯ. ಅಕ್ಸೆಸರಿಗಳಿಗೆ 1,200–3,500 ರೂಪಾಯಿ ಇದ್ದರೆ, ಪ್ರಿಂಟರ್‌ಗೆ 13,350 ರೂಪಾಯಿ. ಕ್ಯೂಬ್‌ಗೆ 9,999 ರೂಪಾಯಿ.  ಈ ಸಾಧನಗಳು ಫ್ಲಿಪ್‌ಕಾರ್ಟ್‌ ಮೂಲಕ ಲಭ್ಯ.  ಇದೇ ಡಿಸೆಂಬರ್‌ನಲ್ಲಿ  ಪೋಲರಾಯ್ಡ್ ವಾವ್‌ ಫೈ ಕ್ಯೂಬ್‌ ಅಂಡ್ ಸ್ನಾಪ್ ಅನ್ನು ಬಿಡುಗಡೆಗೊಳಿಸಲಾಗುವುದು ಎಂದು ಕಂಪೆನಿ ತಿಳಿಸಿದೆ.

ಈ ಸಾಧನದಿಂದ ಒಂದು ನಿಮಿಷದೊಳಗೆ 2’’x3’’ ಗಾತ್ರದ ಪ್ರಿಂಟ್ ತೆಗೆಯಬಹುದು. 186 ಗ್ರಾಂ ತೂಕ ಇದ್ದು, 500mah ಲೀಥಿಯಂ ಪಾಲಿಮರ್ ಬ್ಯಾಟರಿ ಹೊಂದಿದೆ. ಇಂಕ್‌ಲೆಸ್‌ ಆದ ಹತ್ತು ಝಿಂಕ್ ಪೇಪರ್‌ಗಳನ್ನು ಇದರೊಂದಿಗೆ ನೀಡಲಾಗುತ್ತದೆ. ಪ್ರತಿ ಚಾರ್ಜ್‌ಗೆ 25 ಪ್ರಿಂಟ್ ತೆಗೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.