ADVERTISEMENT

ನಿಮ್ಮ ಆರೋಗ್ಯ ವೃದ್ಧಿಸಬೇಕೆ? ಹಾಗಾದರೆ ಆರೋಗ್ಯ ಆ್ಯಪ್‌ ಬಳಸಿ!

ಪಿಟಿಐ
Published 6 ಮಾರ್ಚ್ 2017, 11:14 IST
Last Updated 6 ಮಾರ್ಚ್ 2017, 11:14 IST
ನಿಮ್ಮ ಆರೋಗ್ಯ ವೃದ್ಧಿಸಬೇಕೆ? ಹಾಗಾದರೆ ಆರೋಗ್ಯ ಆ್ಯಪ್‌ ಬಳಸಿ!
ನಿಮ್ಮ ಆರೋಗ್ಯ ವೃದ್ಧಿಸಬೇಕೆ? ಹಾಗಾದರೆ ಆರೋಗ್ಯ ಆ್ಯಪ್‌ ಬಳಸಿ!   

ವಾಷಿಂಗ್ಟನ್‌ :  ಆರೋಗ್ಯ ಆ್ಯಪ್‌ಗಳ ಜತೆ ಸಂವಾದ ನಡೆಸುವುದರಿಂದ ಆರೋಗ್ಯ ಮತ್ತಷ್ಟು ವೃದ್ಧಿಸುತ್ತದೆ ಎಂದು ಅಮೆರಿಕದ ಪೆನ್ ಸೆಲ್ವಿನಿಯಾ ವಿಶ್ವವಿದ್ಯಾಲಯದ ನೂತನ ಅಧ್ಯಯನ ತಿಳಿಸಿದೆ.

ಆರೋಗ್ಯ ಆ್ಯಪ್‌ಗಳ ಜತೆ ಸಂವಾದ ನಡೆಸುವುದು ವೈದ್ಯರು ಮತ್ತು ನರ್ಸ್‌ಗಳ ಜತೆಯಲ್ಲಿ ಸಂವಾದ ನಡೆಸಿದಂತಾಗುವುದರಿಂದ ರೋಗಿಗಳು ಅಥವಾ ಬಳಕೆದಾರರ ಮಾನಸಿಕ ವಿಶ್ವಾಸ  ಹೆಚ್ಚಾಗುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಪೆನ್‌ಸೆಲ್ವಿನಿಯಾ ವಿಶ್ವವಿದ್ಯಾಲಯದಲ್ಲಿ ಹಿರಿಯ ಅಧ್ಯಾಪಕರಾಗಿರುವ ಎಸ್‌. ಶ್ಯಾಮ್‌ಸುಂದರ್‌ ಅವರ ನೇತೃತ್ವದ ತಂಡ ಈ ಸಂಶೋಧನೆ ನಡೆಸಿದೆ. ಅಧ್ಯಯನಕ್ಕೆ ಆರೋಗ್ಯ ಆ್ಯಪ್‌ಗಳನ್ನು ಬಳಸುವ ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಹಾಗೆಯೇ ಆ್ಯಪ್‌ ಬಳಸದವರ ಮಾಹಿತಿಯನ್ನು ಪಡೆದು, ಎರಡು ಅಭಿಪ್ರಾಯಗಳನ್ನು ತುಲನೇ ಮಾಡಿ ಈ ಸಂಶೋಧನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಶ್ಯಾಮ್‌ಸುಂದರ್‌ ತಿಳಿಸಿದ್ದಾರೆ.

ADVERTISEMENT

ಸ್ಥೂಲಕಾಯ, ಹೃದಯ ಸಂಬಂಧಿ ಕಾಯಿಲೆ, ಸಾಮಾನ್ಯ ರೋಗಗಳ ಕುರಿತಂತೆ ಜನರು ಹೆಚ್ಚಾಗಿ ಆರೋಗ್ಯ ಆ್ಯಪ್‌ಗಳ ಜತೆ ಸಂವಾದ ನಡೆಸುತ್ತಾರೆ.  ಈ ರೀತಿ ಸಂವಾದ ನಡೆಸುದರಿಂದ ಜನರು ಕಾಯಿಲೆಗಳ ಬಗ್ಗೆ ಜಾಗೃತರಾಗುತ್ತಾರೆ.

ಇದರಿಂದ ಆ್ಯಪ್‌ ಬಳಸುವವರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುವುದಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಿಂದ   ರೋಗಗಳು ಹರಡುವುದು ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಆರೋಗ್ಯ ಆ್ಯಪ್‌ ಬಳಸುವವರ ಆರೋಗ್ಯ ಸುಧಾರಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.