ADVERTISEMENT

ಫೇಸ್‌ಬುಕ್‌ನಲ್ಲಿ ಲೈವ್‌ ಆಗಿರಿ

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 14 ಸೆಪ್ಟೆಂಬರ್ 2016, 19:30 IST
Last Updated 14 ಸೆಪ್ಟೆಂಬರ್ 2016, 19:30 IST
ಫೇಸ್‌ಬುಕ್‌ನಲ್ಲಿ ಲೈವ್‌ ಆಗಿರಿ
ಫೇಸ್‌ಬುಕ್‌ನಲ್ಲಿ ಲೈವ್‌ ಆಗಿರಿ   

ಸಾಮಾಜಿಕ ಜಾಲತಾಣಗಳನ್ನು ಕೇವಲ ಫೋಟೊ, ವಿಡಿಯೊ ಶೇರ್‌ ಮಾಡಲು ಬಳಸುವವರೇ ಹೆಚ್ಚು. ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಚರ್ಚೆ ನಡೆಸಲು ಫೇಸ್‌ಬುಕ್‌, ಟ್ವಿಟರ್‌ಗಳನ್ನು ಬಳಸುವುದು ಸಾಮಾನ್ಯ.

ಟ್ವಿಟರ್‌ನ ಪದ ಬಳಕೆಯ ಮಿತಿಯಿಂದಾಗಿ ಅಭಿಪ್ರಾಯ ಹಂಚಿಕೆಗೆ, ಚರ್ಚೆಗೆ ಫೇಸ್‌ಬುಕ್‌ ಬಳಸುವವರ ಪಡೆಯೇ ಇದೆ. ಆದರೆ, ಫೇಸ್‌ಬುಕ್‌ನಲ್ಲಿ ಫೋಟೊ, ವಿಡಿಯೊ ಜತೆಗೆ ಅಭಿಪ್ರಾಯ ಹಂಚುವುದರೊಂದಿಗೆ ಲೈವ್‌ ವಿಡಿಯೊ ಸ್ಟ್ರೀಮ್‌ ಕೂಡ ಮಾಡಬಹುದು.

ಫೇಸ್‌ಬುಕ್‌ ಮೂಲಕ ಲೈವ್‌ ಆಗಿರುವುದು ಈಗ ಸುಲಭ. ಸ್ಮಾರ್ಟ್‌ಫೋನ್‌ಗಳ ಮೂಲಕ ಲೈವ್‌ ವಿಡಿಯೊ ಕವರೇಜ್‌ ಮಾಡುವುದು ಈಗ ಬೆರಳ ತುದಿಯ ಕೆಲಸ. ಸಭೆ, ಸಮಾರಂಭ, ಮೆರವಣಿಗೆ ಮಾತ್ರವಲ್ಲದೆ ಮನೆಯ ಸಮಾರಂಭಗಳನ್ನೂ ಲೈವ್‌ ಆಗಿಸುವುದು ಫೇಸ್‌ಬುಕ್‌ ಮೂಲಕ ಸುಲಭ ಸಾಧ್ಯ. ಲೈವ್‌ ಕವರೇಜ್‌ ನೀಡುವ ಮೂಲಕ ನಿಮ್ಮ ಸನ್ನಿವೇಶಕ್ಕೊಂದು ವಿಶೇಷ ಮೆರುಗು ಕೊಡಬಹುದು.

ಫೇಸ್‌ಬುಕ್‌ ಮೂಲಕ ಲೈವ್‌ ಆಗಿರಲು ಹೆಚ್ಚು ತಾಂತ್ರಿಕ ನೈಪುಣ್ಯದ ಅಗತ್ಯವೇನೂ ಇಲ್ಲ. ನಿಮ್ಮ ಬಳಿ ಫೇಸ್‌ಬುಕ್‌ನ ಹೊಸ ಗುಣಲಕ್ಷಣಗಳಿಗೆ ಸಪೋರ್ಟ್‌ ಮಾಡುವ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು. ನೀವು ಕುಳಿತಲ್ಲಿಂದ, ನಿಂತಲ್ಲಿಂದ ಇಲ್ಲವೇ ಮಲಗಿದ್ದಲ್ಲಿಂದಲೇ ಲೈವ್‌ ಕವರೇಜ್‌ ಮಾಡಬಹುದು!
ಲೈವ್‌ ಕವರೇಜ್‌ ಮಾಡಲು ಮೊದಲು ಫೇಸ್‌ಬುಕ್‌ ಆ್ಯಪ್‌ ತೆರೆಯಿರಿ.

ಟೈಮ್‌ಲೈನ್‌ನಲ್ಲಿರುವ LIVE ಐಕಾನ್‌ ಮೇಲೆ ಕ್ಲಿಕ್ಕಿಸಿ. ನಿಮ್ಮ ವಿಡಿಯೊ ಬಗ್ಗೆ ಒಂದೆರಡು ಮಾತುಗಳನ್ನು ಬರೆಯಿರಿ. ನಂತರ GO LIVE ಮೇಲೆ ಕ್ಲಿಕ್ಕಿಸಿದರೆ ಮುಗಿಯಿತು. ಮೂರು ಸೆಕೆಂಡ್‌ಗಳಲ್ಲಿ ನಿಮ್ಮ ವಿಡಿಯೊ ಲೈವ್‌ ಸ್ಟ್ರೀಮ್‌ ಶುರುವಾಗುತ್ತದೆ.

ADVERTISEMENT

ವಿಡಿಯೊ ಲೈವ್‌ ಸ್ಟ್ರೀಮ್‌ ಆಗುತ್ತಿರುವಾಗ ನಿಮ್ಮ ಫೇಸ್‌ಬುಕ್‌ ಗೆಳೆಯರು ಅದನ್ನು ನೋಡುವಂತೆ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಫೇಸ್‌ಬುಕ್‌ ಗೆಳೆಯರ ಬಳಗವನ್ನು ಇನ್ವೈಟ್‌ ಮಾಡಬಹುದು. ನೀವು ಲೈವ್‌ ಆಗಿರುವ ನೋಟಿಫಿಕೇಷನ್‌ ನಿಮ್ಮ ಗೆಳೆಯರಿಗೂ ರವಾನೆಯಾಗಿರುತ್ತದೆ.

ವಿಡಿಯೊ ಲೈವ್‌ ಸ್ಟ್ರೀಮ್‌ ಮುಗಿದ ಮೇಲೆ ಆ ವಿಡಿಯೊ ಟೈಮ್‌ ಲೈನ್‌ನಲ್ಲಿ ರಿಪ್ಲೇ ಆಗಲು ಉಳಿಯುವಂತೆಯೂ ಮಾಡಬಹುದು. ಇದಕ್ಕಾಗಿ ಲೈವ್‌ ಸ್ಟ್ರೀಮ್‌ ಮುಗಿದ ಬಳಿಕ ಸೇವ್‌ ಆಗುವ ವಿಡಿಯೊ ಅನ್ನು ಪೋಸ್ಟ್‌ ಮಾಡಿದರೆ ಅದು ಟೈಮ್‌ ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಬೇಡವಾದರೆ ಡಿಲೀಟ್‌ ಕ್ಲಿಕ್ಕಿಸಿದರೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.