ADVERTISEMENT

ಫೇಸ್‌ಬುಕ್‌ ಡೈರೆಕ್ಟ್‌

ದಯಾನಂದ ಎಚ್‌.ಎಚ್‌.
Published 12 ಏಪ್ರಿಲ್ 2017, 19:30 IST
Last Updated 12 ಏಪ್ರಿಲ್ 2017, 19:30 IST
ಫೇಸ್‌ಬುಕ್‌ ಡೈರೆಕ್ಟ್‌
ಫೇಸ್‌ಬುಕ್‌ ಡೈರೆಕ್ಟ್‌   

ಸ್ಮಾರ್ಟ್‌ಫೋನ್‌ ಮತ್ತು ಇಂಟರ್‌ನೆಟ್‌ ಅಗ್ಗವಾದಂತೆಲ್ಲಾ ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚುತ್ತಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಮೂಲಕ ತಮ್ಮ ಸಿಹಿ– ಕಹಿಗಳನ್ನು ಹಂಚಿಕೊಳ್ಳುವುದು ಈಗ ಸುಲಭ. ಫೇಸ್‌ಬುಕ್‌ ಬಳಸದವರಂತೂ ಈಗ ವಿರಳ. ಹೆಚ್ಚೆಚ್ಚು ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಫೇಸ್‌ಬುಕ್‌ ತನ್ನ ಆ್ಯಪ್‌ ಅನ್ನು ಆಗಾಗ ಅಪ್‌ಡೇಟ್‌ ಮಾಡುತ್ತಲೇ ಇರುತ್ತದೆ. ಅಪ್‌ಡೇಟ್‌ ಜತೆಗೆ ಹೊಸ ಗುಣಲಕ್ಷಣಗಳೂ ಅದರೊಂದಿಗೆ ಸೇರಿಕೊಳ್ಳುತ್ತಿರುತ್ತವೆ. ಇತ್ತೀಚೆಗೆ ಫೇಸ್‌ಬುಕ್‌ ತನ್ನ ಆ್ಯಪ್‌ನಲ್ಲಿ ‘ಡೈರೆಕ್ಟ್‌’ ಆಯ್ಕೆಯನ್ನು ನೀಡಿದೆ.

ಏನಿದು ಡೈರೆಕ್ಟ್‌? ಇತ್ತೀಚೆಗೆ ಫೇಸ್‌ಬುಕ್‌ ಆ್ಯಪ್‌ ಅಪ್‌ಡೇಟ್‌ ಮಾಡಿಕೊಂಡವರು ಈ ಡೈರೆಕ್ಟ್‌ ಆಯ್ಕೆಯನ್ನು ಕಂಡೇ ಇರುತ್ತದೆ. ಕೆಲವರು ಕುತೂಹಲಕ್ಕಾದರೂ ಇದನ್ನು ಒತ್ತಿರುತ್ತಾರೆ. ಆದರೆ, ಈ ಡೈರೆಕ್ಟ್‌ ಆಯ್ಕೆಯನ್ನು ಸೂಕ್ತವಾಗಿ ಬಳಸುವುದು ಹೇಗೆಂದು ಈ ವಾರ ತಿಳಿಯೋಣ. ಫೇಸ್‌ಬುಕ್‌ ನೀಡಿರುವ ಈ ಹೊಸ ಆಯ್ಕೆಯ ಮೂಲಕ ನೀವು ತೆಗೆದ ಫೋಟೊ ಅಥವಾ ವಿಡಿಯೊ ಫೈಲ್‌ ಅನ್ನು ನೇರವಾಗಿ ನಿಮ್ಮ ಗೆಳೆಯರಿಗೆ ಕಳಿಸಬಹುದು. ಒಂದು ಫೋಟೊ ಅಥವಾ ವಿಡಿಯೊ ಅನ್ನು ಒಂದೇ ಬಾರಿಗೆ ಹಲವು ಗೆಳೆಯರಿಗೆ ಕಳಿಸಬಹುದು.

ನೀವು ಫೋಟೊ ಅಥವಾ ವಿಡಿಯೊ ಅನ್ನು ಗೆಳೆಯರಿಗೆ ಕಳಿಸುವುದರ ಜತೆಗೆ ಆ ಫೈಲ್‌ಗಳನ್ನು ನಿಮ್ಮ ಫೇಸ್‌ಬುಕ್‌ ವಾಲ್‌ಗೆ ಪೋಸ್ಟ್ ಕೂಡ ಮಾಡಬಹುದು. Your Story ಎಂಬಲ್ಲಿ ಒತ್ತುವುದರ ಮೂಲಕ ನಿಮ್ಮ ಆಕ್ಟಿವಿಟಿಯನ್ನು ನಿಮ್ಮ ಗೆಳೆಯರಿಗೆಲ್ಲಾ ತೋರಿಸಬಹುದು. ನಿಮಗೆ ಈ ಆಯ್ಕೆ ಬೇಡವೆಂದರೆ ಈ ಆಯ್ಕೆಯನ್ನು ಅನ್‌ಚೆಕ್‌ ಮಾಡಿದರೆ ಆಯಿತು.

ADVERTISEMENT

ನೀವು ಡೈರೆಕ್ಟ್‌ ಆಯ್ಕೆ ಟ್ಯಾಪ್‌ ಮಾಡುವ ಮೂಲಕ ನೇರವಾಗಿ ಫೇಸ್‌ಬುಕ್‌ ಕ್ಯಾಮೆರಾದಿಂದಲೇ ಫೋಟೊ ಅಥವಾ ವಿಡಿಯೊ ರೆಕಾರ್ಡ್‌ ಮಾಡಿ ಕಳಿಸಬಹುದು. ಫೋಟೊ ಕ್ಲಿಕ್ಕಿಸುವ ಬಟನ್‌ ಮೇಲೆ ಲಾಂಗ್‌ಪ್ರೆಸ್‌ ಮಾಡಿದರೆ ವಿಡಿಯೊ ರೆಕಾರ್ಡ್‌ ಆಗುತ್ತದೆ. ಹೀಗೆ ಕ್ಯಾಪ್ಚರ್‌/ ರೆಕಾರ್ಡ್‌ ಆದ ಫೋಟೊ/ ವಿಡಿಯೊಗಳ ಮೇಲೆ ಟೆಕ್ಸ್ಟ್ ಟೈಪ್‌ ಮಾಡಬಹುದು. ಜತೆಗೆ ಡ್ರಾಯಿಂಗ್‌ ಮಾಡುವ ಅವಕಾಶವೂ ಇಲ್ಲಿದೆ.

ಇದರೊಂದಿಗೆ ನಿಮ್ಮ ಫೋಟೊ/ವಿಡಿಯೊಗೆ ವಿಶೇಷ ಎಫೆಕ್ಟ್‌ ಕೊಡುವ ಅವಕಾಶವೂ ಇದೆ. ಇದಕ್ಕಾಗಿ ನೀವು ಎಫೆಕ್ಟ್ ಬಟನ್‌ ಮೇಲೆ ಕ್ಲಿಕ್‌ ಮಾಡಿದರೆ ಸಾಕು, ನಿಮಗೆ ಬೇಕಾದ ಎಫೆಕ್ಟ್‌ ಅನ್ನು ನಿಮ್ಮ ಫೋಟೊ/ವಿಡಿಯೊ ಜತೆಗೆ ಸೇರಿಸಿಕೊಳ್ಳಬಹುದು. ಹೀಗೆ ಎಫೆಕ್ಟ್‌ ಕೊಟ್ಟ ಫೋಟೊ/ವಿಡಿಯೊಗಳನ್ನು ಸೆಂಡ್‌, ಪೋಸ್ಟ್‌ ಮಾಡುವ ಜತೆಗೆ ನಿಮ್ಮ ಡಿವೈಸ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳುವ ಆಯ್ಕೆಯೂ ಇಲ್ಲಿದೆ. ಈ ಆಯ್ಕೆಗಳನ್ನೆಲ್ಲಾ ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.