ಬೆಂಗಳೂರು: ಫೇಸ್ಬುಕ್ನ ಪ್ರತಿಕ್ರಿಯೆಯ (reaction) ಸಾಲಿಗೆ ಹೊಸದಾಗಿ ‘ಗ್ರೇಟ್ಫುಲ್’ ಬಟನ್ ಸೇರಿದೆ. ‘ಲೈಕ್’, ‘ಲವ್’ ನಂತರದಲ್ಲಿ ಹೊಸದಾಗಿ ಗ್ರೇಟ್ಫುಲ್ ಬಟನ್ ಸೇರಿಸಲಾಗಿದೆ.
ಗ್ರೇಟ್ಫುಲ್ ಪ್ರತಿಕ್ರಿಯೆಗೆ ನೀಲಿ ಹೂವಿನ ಚಿತ್ರದ ಆಯ್ಕೆ ನೀಡಲಾಗಿದೆ. ಉಪಕಾರ ಸ್ಮರಣೆ ಹಾಗೂ ಧನ್ಯವಾದ ಹೇಳಲು ಈ ಬಟನ್ ಬಳಸಬಹುದು.
ಫೇಸ್ಬುಕ್ನಲ್ಲಿ ಮೊದಲು ಲೈಕ್ ಮಾಡಲಷ್ಟೇ ಅವಕಾಶವಿತ್ತು. ನಂತರದ ದಿನಗಳಲ್ಲಿ ಪ್ರತಿಕ್ರಿಯೆಯ ಸಾಲಿಗೆ ‘ಹ ಹ’, ‘ವಾವ್’, ‘ಸಾಡ್’ ಮತ್ತು ‘ಆ್ಯಂಗ್ರಿ’ ಪ್ರತಿಕ್ರಿಯೆಯ ಬಟನ್ಗಳನ್ನು ಸೇರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.