ADVERTISEMENT

ಮತ್ತೆ ಬಂದ ನೋಕಿಯಾ 3310!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2017, 19:42 IST
Last Updated 26 ಫೆಬ್ರುವರಿ 2017, 19:42 IST
ಮತ್ತೆ ಬಂದ ನೋಕಿಯಾ 3310!
ಮತ್ತೆ ಬಂದ ನೋಕಿಯಾ 3310!   

ಬೆಂಗಳೂರು: ದಶಕದ ಹಿಂದೆ ಮಾರುಕಟ್ಟೆಯಲ್ಲಿದ್ದ, ಅತ್ಯಂತ ಜನಪ್ರಿಯ ಮೊಬೈಲ್‌ ಫೋನ್‌ಗಳಲ್ಲಿ ಒಂದಾಗಿದ್ದ ‘ನೋಕಿಯಾ 3310’ ಮಾರುಕಟ್ಟೆಗೆ ಬರಲಿದೆ.

ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್‌ ಸಮಾವೇಶದಲ್ಲಿ ಎಚ್‌ಎಂಡಿ ಗ್ಲೋಬಲ್ ಕಂಪೆನಿ (ನೋಕಿಯಾ ಬ್ರ್ಯಾಂಡ್‌ ಅಡಿ ಮೊಬೈಲ್‌ ಫೋನ್‌ ಮಾರಾಟ ಮಾಡುವ ಹಕ್ಕು ಪಡೆದಿರುವ ಕಂಪೆನಿ) ನೋಕಿಯಾ 3310 ಫೋನ್‌ಅನ್ನು ಅನಾವರಣಗೊಳಿಸಿದೆ.

ಇದರ ಬೆಲೆ 49 ಯೂರೊ (ಅಂದಾಜು  ₹3,448) ಎಂದು ಕಂಪೆನಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಆದರೆ ಭಾರತದ ಮಾರುಕಟ್ಟೆಯನ್ನು ಇದು ಯಾವಾಗ ಪ್ರವೇಶಿಸಲಿದೆ, ಇಲ್ಲಿ ಎಷ್ಟು ಬೆಲೆ ನಿಗದಿಯಾಗಲಿದೆ ಎಂಬುದು ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.