ADVERTISEMENT

ಫೇಸ್‍‍ಬುಕ್‍‍ನಲ್ಲಿ ಸ್ಲೈಡ್‍ ಶೋ ರಚಿಸಿ

ದಯಾನಂದ ಎಚ್‌.ಎಚ್‌.
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಫೇಸ್‍‍ಬುಕ್‍‍ನಲ್ಲಿ   ಸ್ಲೈಡ್‍ ಶೋ ರಚಿಸಿ
ಫೇಸ್‍‍ಬುಕ್‍‍ನಲ್ಲಿ ಸ್ಲೈಡ್‍ ಶೋ ರಚಿಸಿ   

ಸ್ಮಾರ್ಟ್‌ಫೋನ್‍ನಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುವುದು ಬಹುತೇಕರ ಹವ್ಯಾಸ. ಹೀಗೆ ಕ್ಲಿಕ್ಕಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅದೇ ಹವ್ಯಾಸದ ಮುಂದುವರಿದ ಭಾಗ. ಹೀಗೆ ಚಿತ್ರಗಳನ್ನಷ್ಟೇ ಫೇಸ್‍‍ಬುಕ್‍, ಟ್ವಿಟರ್‍‍, ಇನ್‍‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುವ ಬದಲು ಅದೇ ಚಿತ್ರಗಳನ್ನು ಸ್ಲೈಡ್‍‍ ಶೋ ಆಗಿ ರಚಿಸಬಹುದು. ಹದವಾದ ಸಂಗೀತದ ಜತೆಗೆ ಚಿತ್ರಗಳ ಸ್ಲೈಡ್‍‍ ಶೋ ರಚಿಸಿ ಅದನ್ನು ಫೇಸ್‍‍ಬುಕ್‍‍ನಲ್ಲಿ ಹಂಚಿಕೊಳ್ಳಬಹುದು. ಫೇಸ್‍‍ಬುಕ್‍‍ನಲ್ಲಿ ಸ್ಲೈಡ್‍‍ ಶೋ ರಚಿಸುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ಫೇಸ್‍‍ಬುಕ್ ಆ್ಯಪ್‍‍ ತೆರೆಯಿರಿ. ‘ಇಲ್ಲಿ ಏನಾದರೂ ಬರೆಯಿರಿ’ ಎಂಬಲ್ಲಿ ಕ್ಲಿಕ್‍‍ ಮಾಡಿ. ಈಗ ಕಾಣುವ ಆಯ್ಕೆಗಳಲ್ಲಿ Slideshow ಎಂಬಲ್ಲಿ ಕ್ಲಿಕ್ಕಿಸಿ. ಈಗ ADD PHOTOS ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮ್ಮ ಫೋನ್‍‍ನಲ್ಲಿರುವ ಚಿತ್ರಗಳ ಪೈಕಿ ಯಾವ ಚಿತ್ರಗಳನ್ನು ಸ್ಲೈಡ್ ಶೋ ಮಾಡಬೇಕೋ ಆಯಾ ಚಿತ್ರಗಳ ಮೇಲೆ ಕ್ಲಿಕ್ ಮಾಡುತ್ತಾ ಹೋಗಿ. ಚಿತ್ರಗಳನ್ನು ಆಯ್ಕೆ ಮಾಡಿಕೊಂಡ ಮೇಲೆ NEXT ಎಂಬಲ್ಲಿ ಕ್ಲಿಕ್ ಮಾಡಿ. ಈಗ ಆ ಚಿತ್ರಗಳಿಗೆ ಸಂಗೀತದ ಸ್ಪರ್ಶ ನೀಡುವ ಕೆಲಸ. ಇದಕ್ಕಾಗಿ ಇಲ್ಲಿ ಕಾಣುವ MUSIC ಎಂಬ ಆಯ್ಕೆಯ ಮೇಲೆ ಕ್ಲಿಕ್ಕಿಸಿ.

ಇಲ್ಲಿನ ಮ್ಯೂಸಿಕ್‍ ಫೈಲ್‍‍ಗಳಲ್ಲಿ ಚಿತ್ರಗಳಿಗೆ ಸೂಕ್ತವೆನಿಸುವುದನ್ನು ಆರಿಸಿ. ಸಂಗೀತದ ಆಯ್ಕೆ ಮುಗಿದ ಮೇಲೆ ಸ್ಲೈಡ್‍‍ ಶೋಗೆ ಹೆಸರು ಕೊಡಿ. ಇದಕ್ಕಾಗಿ ಇಲ್ಲಿನ TITLE ಎಂಬಲ್ಲಿ ಕ್ಲಿಕ್ ಮಾಡಿ. ನಿಮಗೆ ಇಷ್ಟವಾದ ಹೆಸರು ಕೊಟ್ಟು NEXT ಕ್ಲಿಕ್ ಮಾಡಿ. ಈಗ ಚಿತ್ರಗಳ ಸ್ಲೈಡ್‍‍ ಶೋ ವಿಡಿಯೊ ರಚನೆಯಾಗುತ್ತದೆ. ರಚನೆಯಾದ ಸ್ಲೈಡ್‍‍ ಶೋ ಅನ್ನು ನಿಮ್ಮ ಗೆಳೆಯರಿಗೆ ಟ್ಯಾಗ್ ಮಾಡಲೂ ಇಲ್ಲಿ ಅವಕಾಶವಿದೆ. ನೀವು ಟ್ಯಾಗ್ ಮಾಡಿರುವ ಗೆಳೆಯರ ಪ್ರೊಫೈಲ್‍‍ ಚಿತ್ರವೂ ಈ ಸ್ಲೈಡ್‍‍ನ ಕೊನೆಗೆ ಕಾಣಿಸಿಕೊಳ್ಳುತ್ತದೆ. ಬಳಿಕ ನಿಮ್ಮ ಗೆಳೆಯರಿಗೆ ಕಾಣುವಂತೆ ಇಲ್ಲವೇ ಎಲ್ಲರಿಗೂ ಕಾಣುವಂತೆ ಫೇಸ್‍‍ಬುಕ್‍‍ನಲ್ಲಿ ಪೋಸ್ಟ್ ಮಾಡಬಹುದು.

ADVERTISEMENT

ನಿಮ್ಮಲ್ಲೂ ಪ್ರವಾಸ, ಸಮಾರಂಭಗಳಲ್ಲಿ ತೆಗೆದ ಸಾಕಷ್ಟು ಚಿತ್ರಗಳಿವೆಯೇ? ಹಾಗಾದರೆ ಫೇಸ್‍‍ಬುಕ್‍‍ನಲ್ಲಿ‍ ಸ್ಲೈಡ್‍ ಶೋ ರಚಿಸಿ ಗೆಳೆಯರೊಂದಿಗೆ ಹಂಚಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.