ADVERTISEMENT

ಭವಿಷ್ಯಕ್ಕೆ ಭಾಷ್ಯ ಬರೆಯುವ ಶೀಲಾ ಬಜಾಜ್‌

ಸಾಧಕಿ

​ಪ್ರಜಾವಾಣಿ ವಾರ್ತೆ
Published 20 ಮೇ 2016, 19:41 IST
Last Updated 20 ಮೇ 2016, 19:41 IST
ಶೀಲಾ ಬಜಾಜ್‌
ಶೀಲಾ ಬಜಾಜ್‌   

ಬಾಲಿವುಡ್‌ ನಟ ಅಜಯ್‌ ದೇವಗನ್‌ ತನ್ನ ಹೆಸರಿನಿಂದ ‘ಎ’ ಎಂಬ ಒಂದು ಅಕ್ಷರವನ್ನು ತೆಗೆಸಿ ಹಾಕಿದ್ದಾನೆ, ದಬಾಂಗ್‌ ಸಿನಿಮಾದಲ್ಲಿ ಇಂಗ್ಲಿಷ್‌ನ ‘ಜಿ’ ಒಂದು ಅಕ್ಷರ ಕೊನೆಯಲ್ಲಿ ಹೆಚ್ಚು ಸೇರಿಸಲಾಗಿದೆ, ಬಿಗ್‌ ಬಾಸ್‌ ನಲ್ಲಿ ಬಿಗ್‌ ಪದ ಇಂಗ್ಲಿಷ್‌ನಲ್ಲಿ ‘bigg’  ಆಗಿದೆ.

ಹಿಂದಿ ಧಾರಾವಾಹಿಗಳ ನಿರ್ಮಾಪಕಿ ಏಕ್ತಾ ಕಪೂರ್ ತನ್ನ ಧಾರಾವಾಹಿ ‘ಕಹಾನಿ ಘರ್‌ ಘರ್‌ ಕಿ’ ಯನ್ನು ಸಂಖ್ಯಾ ಭವಿಷ್ಯಶಾಸ್ತ್ರದ ಆಧಾರದಲ್ಲಿ ನಿರ್ಮಿಸಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಸಂಖ್ಯಾ ಭವಿಷ್ಯ ಶಾಸ್ತ್ರ (ನ್ಯುಮರಾಲಜಿ) ಮೇಲಿರುವ ನಂಬಿಕೆ.

ಯಾವುದೇ ಕಟ್ಟಡಕ್ಕೆ ಅಡಿಗಲ್ಲು ಹಾಕುವಾಗ, ಹೊಸ ಕಚೇರಿ ತೆರೆಯುವಾಗ, ಬ್ಯುಸಿನೆಸ್ ಆರಂಭಿಸುವಾಗ, ಸಿನಿಮಾ ಬಿಡುಗಡೆ ಮಾಡುವಾಗ ಮೊದಲು ಪೂಜೆ ಮಾಡುವುದು ಪದ್ಧತಿ. ಮುಂದಿನ ಕೆಲಸ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರ್ವಿಘ್ನವಾಗಿ ಸಾಗಲಿ ಎಂಬುದೇ ಇದರ ಹಿಂದಿನ ಆಶಯ.

ಸೆಲೆಬ್ರಿಟಿಗಳು, ಸಿನಿಮಾ ನಿರ್ಮಾಪಕರು, ಧಾರಾವಾಹಿ ನಿರ್ದೇಶಕರು, ಐಟಿ ಕಂಪೆನಿ ಮಾಲಿಕರು ಯಾವುದೇ ಕೆಲಸ ಆರಂಭಕ್ಕೆ ಮುನ್ನ ‘ಸಂಖ್ಯಾ ಭವಿಷ್ಯ ಶಾಸ್ತ್ರ’ (ನ್ಯುಮರಾಲಜಿ)ದ ಮೊರೆ ಹೋಗುತ್ತಿರುವುದು ಹೊಸ ವಿದ್ಯಮಾನ. 

ಈ ಸಂಖ್ಯಾ ಭವಿಷ್ಯ ಶಾಸ್ತ್ರವನ್ನು ಓದಿ ಆಳವಾದ ಅನುಭವ ಪಡೆದು ಕಳೆದ 20 ವರ್ಷಗಳಿಂದ ಈ ಅನುಭವವನ್ನು ಆಸಕ್ತರಿಗೆ ಧಾರೆ ಎರೆಯುತ್ತಿರುವವರು ಬೆಂಗಳೂರಿನ ಕೋರಮಂಗಲದಲ್ಲಿರುವ ಶೀಲಾ ಬಜಾಜ್‌. ಸಂಖ್ಯಾಶಾಸ್ತ್ರಜ್ಞೆ, ಮಗುವಿನ ಹೆಸರು, ಬ್ಯುಸಿನೆಸ್‌ ಹೆಸರು ಸಂಖ್ಯಾಶಾಸ್ತ್ರ ಪರಿಣತೆ, ಟ್ಯಾರೊಟ್‌ ಕಾರ್ಡ್‌ ರೀಡರ್‌, ಫೆಂಗ್‌ ಶ್ಯು ಮಾಸ್ಟರ್‌ ಖಗೋಳ ಶಾಸ್ತ್ರದ ಬಗ್ಗೆ ಅಪಾರ ಜ್ಞಾನವುಳ್ಳವರು ಶೀಲಾ.

‘ಜಗತ್ತಿನ ಪ್ರತಿಯೊಂದು ಕೆಲಸ ಕಾರ್ಯ, ಹೆಸರುಗಳು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ನಿಂತಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಚಾರ’ ಎನ್ನುತ್ತಾರೆ ಈ ಸಂಖ್ಯಾ ಭವಿಷ್ಯ ಶಾಸ್ತ್ರ ತಜ್ಞೆ.

ಈ ವಿಜ್ಞಾನದಲ್ಲಿ ಪಳಗಿರುವ ಶೀಲಾ ಬಜಾಜ್‌, ಇದರ ಅಧ್ಯಯನಕ್ಕಾಗಿ ಅಮರಿಕ ಮತ್ತು ಆಸ್ಟ್ರೇಲಿಯಾದ ಕೋಪನ್‌ ಹೇಗನ್‌ ಸುತ್ತಿ ಬಂದಿದ್ದಾರೆ. ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಸ್ಕೂಲ್‌ ಆಫ್‌ ಏನ್ಷಿಯಂಟ್‌ ವಿಸ್‌ಡಂ ನಲ್ಲಿ ನ್ಯುಮರಾಲಜಿ ಬಗ್ಗೆ ಕೋರ್ಸ್‌ ಮಾಡಿದ್ದಾರೆ. ಇದರ ಜತೆಗೆ ಅಮೆರಿಕದಲ್ಲಿ ರೇಖಿ ಮಾಸ್ಟರ್‌ಶಿಪ್‌ ಕೋರ್ಸ್‌ ಅನ್ನು ಮಾಡಿದ್ದಾರೆ.

ಹಾಗೆ ನೋಡಿದರೆ ಶೀಲಾ ಓದಿದ್ದು ಆರ್ಟ್‌ ಅಂಡ್‌ ಡಿಸೈನ್‌ನಲ್ಲಿ ಪದವಿ. ಅವರ ಆಸಕ್ತಿ ನ್ಯುಮರಾಲಜಿ ಮೇಲೆ. ಈಗ ಶೀಲಾ ಸಂಖ್ಯಾಶಾಸ್ತ್ರದಲ್ಲಿ ವಿಶೇಷ ಪರಿಣತಿ ಇರುವ ಅನುಭವಿ ನ್ಯುಮರಾಲಜಿಸ್ಟ್‌. ಇದುವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿಗೆ ನ್ಯುಮರಾಲಜಿ ಸಲಹೆ (ಕನ್ಸಲ್ಟೇಷನ್‌) ನೀಡಿದ ಹೆಗ್ಗಳಿಕೆ ಇವರದು.

‘ನ್ಯುಮರಾಲಜಿಯಲ್ಲಿ ಸಮಸ್ಯೆಯ ಬೇರು ಸಮೇತ ಅಧ್ಯಯನ ಮಾಡಿ ಪರಿಹಾರ ಕಂಡುಹಿಡಿಯಬಹುದು. ನಮ್ಮ ಎಲ್ಲ ಕ್ರಿಯೆಗಳು ಗ್ರಹಗತಿಗಳ ಮೇಲೆ ಅವಲಂಬಿತವಾಗಿದೆ. ಇದನ್ನು ವ್ಯಕ್ತಿಯ ಹೆಸರಿನಲ್ಲಿ, ಸಂಸ್ಥೆ, ಕಂಪೆನಿಗಳ ಹೆಸರನ್ನು ಸಂಖ್ಯೆಯೊಂದಿಗೆ, ಗ್ರಹಗತಿಯೊಂದಿಗಿನ ತಾಳೆ ಹಾಕುವ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ’ ಎನ್ನುತ್ತಾರೆ ಶೀಲಾ.

ಕಳೆದ 10 ವರ್ಷಗಳಿಂದ ಎಫ್‌ಎಂ ರೇಡಿಯೊದಲ್ಲಿ ಸಂಖ್ಯಾಶಾಸ್ತ್ರದ ಬಗ್ಗೆ ಕಾರ್ಯಕ್ರಮ ನಡೆಸಿಕೊಡುತ್ತಾ ಬಂದಿದ್ದಾರೆ. ಹಿಂದಿ ಚಾನಲ್‌ಗಳಾದ ಆಜ್‌ತಕ್‌, ದಿಲ್ಲಿ ಆಜ್‌ತಕ್‌ಗಳಿಗೂ ನಿರಂತರವಾಗಿ ಅನೇಕ ಸರಣಿ ಕಾರ್ಯಕ್ರಮ ನೀಡುತ್ತಿದ್ದಾರೆ. ಇಂಡಿಯಾ ಟುಡೆ, ಐಟಿಎಂಐ ಓಯೆ 104.8 ಎಫ್‌ಎಂಗಳಲ್ಲಿ ಅನೇಕ ಕಾರ್ಯಕ್ರಮ ನೀಡುತ್ತಿದ್ದಾರೆ.

ನ್ಯುಮರಾಲಜಿ ಯಾವುದರ ಮೇಲೆ?
ಹೆಸರಿನ ಮೇಲೆ, ಸಿನಿಮಾ ಟೈಟಲ್‌ ಮೇಲೆ, ರಾಜಕೀಯದಲ್ಲಿ, ಸರ್ಕಾರಿ ನೌಕರರು, ಆದಾಯ ತೆರಿಗೆ ಅಧಿಕಾರಿಗಳು, ಸಿನಿಮಾ ತಾರೆಯರು ಸಂಖ್ಯಾಶಾಸ್ತ್ರವನ್ನೇ ನಂಬಿದ್ದಾರೆ. ಬ್ಯುಸಿನೆಸ್‌ ನೇಮ್‌ ಕರೆಕ್ಷನ್‌ಗೆ ಬರ್ತಾರೆ, ಐಟಿ ಕಂಪೆನಿ ಆರಂಭಿಸುವಾಗ, ಶಾಲೆಗೆ ಸೇರಿಸುವಾಗ ಬರ್ತಾರೆ’ ಎನ್ನುತ್ತಾರೆ ಶೀಲಾ.

ಸುಮಾರು 20 ವರ್ಷಗಳಿಂದ ಸಂಖ್ಯಾಶಾಸ್ತ್ರವನ್ನು ಪ್ರಾಕ್ಟೀಸ್‌ ಮಾಡುತ್ತಾ ಬಂದ ಶೀಲಾ ಹೆಡ್‌ಲೈನ್ಸ್‌ ಟುಡೆ, ರೇಡಿಯೊ ಶೋ ನೀಡಿದವರು. ಹಲವು ಆಂಗ್ಲ ಪತ್ರಿಕೆಗಳಲ್ಲಿ ಬರಹಗಳನ್ನೂ ಬರೆದವರು. ವಿವಿಧ ವೇದಿಕೆಗಳಲ್ಲಿ ಉಪನ್ಯಾಸ ನೀಡಿದ ಅನುಭವವೂ ಇವರ ಬೆನ್ನಿಗಿದೆ. ಶೀಲಾ ಬಜಾಜ್‌ ಹೋಲಿಸ್ಟಿಕ್‌ ಹೀಲರ್‌, ಸ್ಪಿರಿಚ್ಯುವಲ್‌ ಟೀಚರ್‌, ನ್ಯುಮರಾಲಜಿ ಬಗ್ಗೆ ಸೀಕ್ರೆಟ್‌ ಸೈನ್ಸ್‌ ಅನ್ನು ಅಧ್ಯಯನ ಮಾಡಿ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ.

ಸಂಖ್ಯಾ ಭವಿಷ್ಯ ಶಾಸ್ತ್ರ ಹಾಗೂ ಟ್ಯಾರೊಟ್‌ ರೀಡಿಂಗ್‌ನಲ್ಲಿ ಮಾಡಿದ ಅತ್ಯುನ್ನತ ಸಾಧನೆಗಾಗಿ ಶೀಲಾ ಬಜಾಜ್‌ ಇತ್ತೀಚೆಗೆ ರಾಷ್ಟ್ರಮಟ್ಟದ ‘ದಿ ಲೈಫ್‌ಸ್ಟೈಲ್‌ 2016’ ಪ್ರಶಸ್ತಿ ಲಭಿಸಿದೆ. 

ಶೀಲಾ ಬಜಾಜ್‌ ಸಂಪರ್ಕ: 9900120034

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.