ADVERTISEMENT

ಸಂಕ್ರಾಂತಿ ಸಂಭ್ರಮ 2016 ಮೆಚ್ಚುಗೆ ಪಡೆದ ಪ್ರಬಂಧ

ತೀರ್ಪುಗಾರರ ಮಾತು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ಮುಂಬಯಿಯ ನಗರ ಬದುಕಿನ ಒತ್ತಡಗಳನ್ನೆಲ್ಲ ಅನುಭವಿಸಿ, ಅವುಗಳಿಂದ ಬಿಡುಗಡೆ ಹೊಂದಿ, ನಿವೃತ್ತಿ ಜೀವನ ನಡೆಸಲು ಮೈಸೂರಿನಂತಹ ಶಾಂತ ಸ್ಥಳಕ್ಕೆ ಬಂದಾಗ ಗಂಡ ಎನ್ನುವ ವ್ಯಕ್ತಿಯ ಸ್ವಭಾವದಲ್ಲಿ ಹೊಂದಾಣಿಕೆಯ ಸ್ವಭಾವ ಇಲ್ಲದೇ ಹೋದಾಗ, ವಯಸ್ಸಾದ ಹೆಣ್ಣು ಯಾವ ರೀತಿ ಸಂಕಟಪಡುತ್ತಾಳೆ ಎನ್ನುವ ಪ್ರಾಪಂಚಿಕ ಬದುಕಿನ ಕೆಲವು ದೃಶ್ಯಗಳು ಇಲ್ಲಿವೆ. 

ಪುಟ್ಟಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಂಡಾಗ ಜೀವನ ಎಷ್ಟು ಸಮರಸದಿಂದ ಕೂಡುತ್ತದೆ ಎನ್ನುವ ಬಗೆಗಿನ ಅನುಭವಗಳು ಈ ಪ್ರಬಂಧದಲ್ಲಿ ನೈಜವಾಗಿ ಮೂಡಿ ಬಂದಿವೆ.  ಒತ್ತಡದ ಬದುಕಿನ, ಒಂಟಿಗಾಲಿನ ಮೇಲೆ ನಿಂತ ಸ್ಥಿತಿಯನ್ನು ಹೇಳುತ್ತಲೇ ಹೊಸ ಬೆಳಕಿನತ್ತ ಸಾಗುವ ಈ ಪ್ರಬಂಧ, ಪ್ರಾಮಾಣಿಕ ಅನುಭವ ಹಾಗು ಕನ್ನಡಿಯಲ್ಲಿ ತೋರಿಸಿದಂತಿರುವ ವಾಸ್ತವಿಕತೆಯಿಂದ, ಓದುಗನಿಗೆ ಹೊಸ ತಿಳುವಳಿಕೆಯನ್ನು ಧಾರೆ ಎರೆಯುತ್ತದೆ ಎನ್ನುವುದರಲ್ಲಿ ಯಾವ ಸಂಶಯವೂ ಇರಲಾರದು! 
- ಎಸ್‌.ಎಫ್‌. ಯೋಗಪ್ಪನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.