ADVERTISEMENT

ಪುಸ್ತಕ ವಿಮರ್ಶೆ: ಅಂಬೇಡ್ಕರ್‌ ಅಂತರಂಗದ ಸ್ವಗತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 14:38 IST
Last Updated 16 ಅಕ್ಟೋಬರ್ 2021, 14:38 IST
ಅವಿತಿಟ್ಟ ಅಂಬೇಡ್ಕರ್‌
ಅವಿತಿಟ್ಟ ಅಂಬೇಡ್ಕರ್‌   

ಸಂವಿಧಾನ ರಚನೆಯ ಜವಾಬ್ದಾರಿ ನಿಭಾಯಿಸಿದ ಬಳಿಕ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಅಂತರಂಗವನ್ನು ತೆರೆದಿಡುವಪ್ರಯತ್ನವೇ ‘ಅವಿತಿಟ್ಟ ಅಂಬೇಡ್ಕರ್‌’ ನಾಟಕ.

ಇದುವರೆಗೆ ಓದಿದ, ಕೇಳಿದ ಅಂಬೇಡ್ಕರ್‌ ಬದುಕಿನ ಆಚೆಗಿನ ಅಂತರಂಗದ ಸ್ವಗತ ಮೊನಚು ಮಾತಿನಲ್ಲಿ ವ್ಯಕ್ತವಾಗಿದೆ. ಸಂವಿಧಾನ ರಚನಾಸಭೆಯ ಉಪಾಧ್ಯಕ್ಷ ಟಿ.ಟಿ. ಕೃಷ್ಣಮಾಚಾರಿ ಅವರು ಅಂಬೇಡ್ಕರ್‌ ಅವರನ್ನು ಶ್ಲಾಘಿಸುವ ಮಾತಿನ ಹಿಂದಿದ್ದ ವ್ಯಂಗ್ಯ, ಕಾಂಗ್ರೆಸ್‌ ಸದಸ್ಯ ಅಶ್ರತ್‌ ಮೊಹಾನಿ, ಮಹಾವೀರ್‌ ತ್ಯಾಗಿ ಅವರ ವ್ಯಂಗ್ಯದ ಮಾತುಗಳು ಅಂಬೇಡ್ಕರ್‌ ಅವರನ್ನು ಅವಮಾನಿಸಿದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡುನಾಟಕ ಬೆಳೆಯುತ್ತದೆ. ಈ ಘಟನೆಗಳ ಆಧಾರ ಗ್ರಂಥಗಳನ್ನೂ ಉಲ್ಲೇಖಿಸಲಾಗಿದೆ.

ಮೊದಲ ದೃಶ್ಯದಲ್ಲಿ ಶೇಷ ಹೆಸರಿನ ಪಾತ್ರದ ಸಂಭಾಷಣೆ ನಾಟಕದ ಸಾರ ತೆರೆದಿಟ್ಟಿದೆ. ‘ನಾವೀಗ ಕಳ್ಳರನ್ನು ಹಿಡಿಯಬೇಕಿಲ್ಲ. ಬಾಬಾ ಸಾಹೇಬರ ನಿಜವನ್ನು ಹುಡುಕಬೇಕು. ಹಾಗೇ ಮಾಡ್ತಾ ನಾವೇ ಕಳ್ಳರು, ಕ್ರಿಮಿನಲ್‌ಗಳು ಅನಿಸಿದರೆ ನಮಗೆ ಶಿಕ್ಷೆ ಕೊಡಬಾರದು’.

ADVERTISEMENT

‘ನೀವು ಸೋತು ಹೋಗಿದ್ದೀರಿ ಎಂಬ ಚಿಂತೆ ಬೇಡ. ನಾವಿದ್ದೇವಲ್ಲ... ನಿಮ್ಮ ಆರೋಗ್ಯ ಕ್ಷೀಣಿಸುತ್ತಿದೆ. ಕಾಳಜಿ ಮಾಡಿ. ಜೀವನದ ಕೊನೆಯವರೆಗೂ ನಮ್ಮ ಜನಾಂಗದ ನಾಯಕನಾಗಿರುತ್ತೇನೆ. ಪ್ರತೀ ಚುನಾವಣೆಯನ್ನೂ ಗೆಲ್ಲುತ್ತೇನೆ’ ಎಂದು ನಾರಾಯಣ ಸಡೋಬ ಕಜ್ರೋಲ್ಕರ್‌ ಅವರನ್ನು ಪ್ರತಿನಿಧಿಸುವ ಪಾತ್ರವೊಂದು ಅಂಬೇಡ್ಕರ್‌ ಅವರನ್ನು ಅಣಕಿಸುತ್ತದೆ.

‘ಅಸ್ಪೃಶ್ಯ ಎಂಬ ಶಬ್ದ ಬಳಸಿದರೆ ನನಗೆ ಸಕ್ಕರೆಯೂ ಸಿಹಿಯಾಗುವುದಿಲ್ಲ...’ ಎನ್ನುವಲ್ಲಿ ಅಗಾಧ ಅಸಹನೆ ವ್ಯಕ್ತವಾಗಿದೆ. ಕಾಂಗ್ರೆಸ್‌ನ ಕಪಿಮುಷ್ಟಿ, ಗಾಂಧಿ ಹೆಸರಿನ ದುರುಪಯೋಗ, ಮುಸ್ಲಿಮರ ಪ್ರತಿಕ್ರಿಯೆ, ದತ್ತೋಪಂಥ ಠೇಂಗಡಿ ಅವರೊಂದಿಗಿನ ಆತ್ಮೀಯ ಒಡನಾಟ, ದೇಶ ವಿಭಜನೆ ಸಂದರ್ಭದ ಪ್ರತಿಕ್ರಿಯೆಗಳನ್ನು ಈ ಪುಟ್ಟ ಕೃತಿಯಲ್ಲಿ 8 ಪಾತ್ರಗಳು ಹತ್ತು ದೃಶ್ಯಗಳಲ್ಲಿ ವಿವರವಾಗಿಕಟ್ಟಿಕೊಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.