ADVERTISEMENT

ಮರಡೂರಗೆ ‘ಖಯಾಲ್‌ ಸಂಗೀತ ರತ್ನ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 19:45 IST
Last Updated 23 ಆಗಸ್ಟ್ 2019, 19:45 IST
Spmanath
Spmanath   

ಪಂ. ಸೋಮನಾಥ ಮರಡೂರ. ಹೆಸರು ಕೇಳಿದರೆ ಸಾಕು, ವೇದಿಕೆ ಮುಂದೆ ಹಾಜರಾಗುತ್ತಾರೆ ಸಂಗೀತಪ್ರೇಮಿಗಳು. ಪಂ. ಸೋಮನಾಥರ ಸಂಗೀತ ಸುಧೆಯ ವೈಖರಿಯೇ ಅಂಥದ್ದು. ಇದೇ 25ರಂದು, ಭಾನುವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಖಯಾಲ್‌ ಸಂಗೀತ ಉತ್ಸವದಲ್ಲಿ ಅವರ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವಿದೆ. ಇದೇ ಸಂದರ್ಭದಲ್ಲಿ ಅವರಿಗೆ ‘ಖಯಾಲ್‌ ಸಂಗೀತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಹಾವೇರಿ ಜಿಲ್ಲೆಯ ಮರಡೂರುಪಂ. ಸೋಮನಾಥರ ಹುಟ್ಟೂರು. ಮಾತು ಕಲಿಯುವ ವಯಸ್ಸಿನಲ್ಲಿಯೇ ಸಂಗೀತ ಕಲಿಯಲು ಆರಂಭಿಸಿದ ಸೋಮನಾಥ ನಾಲ್ಕನೇ ವಯಸ್ಸಿಗೇ ವೀರಪ್ಪಯ್ಯ ಸ್ವಾಮೀಜಿ ಅವರಿಂದ ಸಂಗೀತಾಭ್ಯಾಸ ಶುರುಮಾಡಿದರು. ಮುಂದಿನ ಸಂಗೀತಾಭ್ಯಾಸಕ್ಕೆಗದಗಿನ ಪಂ. ಪುಟ್ಟರಾಜ ಗವಾಯಿಗಳು ಗುರುವಾದರು.

ಶಾಸ್ತ್ರೀಯ ಸಂಗೀತದ ಆಯಾಮಗಳಿಗೆ ಪಂ. ಬಸವರಾಜ ರಾಜಗುರು ಹಾಗೂ ಪಂ.ಮಲ್ಲಿಕಾರ್ಜುನ ಮನ್ಸೂರರ ಮಾರ್ಗದರ್ಶನ ಲಭಿಸಿತು. ನಾಡಿನ ವಿದ್ವಾಂಸರಿಂದ ಹಿಂದೂಸ್ತಾನಿ ಹಾಗೂ ಶಾಸ್ತ್ರೀಯ ಸಂಗೀತ ಕಲಿತು, ಅದರ ಆಧಾರದ ಮೇಲೆ ತಮ್ಮದೇ ಆದ ಸಂಗೀತಪ್ರಭೆಯನ್ನು ಬೆಳೆಸಿಕೊಂಡರು.ಹಿಂದೂಸ್ತಾನಿ ಸಂಗೀತವನ್ನು ಪ್ರಪಂಚದಾದ್ಯಂತ ಪ್ರಚುರಪಡಿಸಲು ದೇಶ–ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ ಹಿರಿಮೆ ಅವರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.