ADVERTISEMENT

ರಂಗಸ್ವಾಮಿ ಮಾರ್ಲಬಂಡಿ ಅವರ ಕವಿತೆ: ಅದನ್ನು ಮೀರಿದಿದೇನೊ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 2:33 IST
Last Updated 5 ಸೆಪ್ಟೆಂಬರ್ 2021, 2:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಣಗಿದ ನೆಲದಿ
ಗುಬ್ಬಕ್ಕಿ ಹಾರುತಿತ್ತು
ಕುಂತು ಕೂಡದೆ
ರೆಕ್ಕೆಯಲಿ ಹರಸುತ್ತಾ
ಸ್ವಾತಂತ್ರ್ಯದ ಕುರುಹಾಗಿ
ಜಗವ ನೋಡುತಿತ್ತು.

ವಿಷಾದದ ಧ್ವನಿಯಲ್ಲಿ
ವಿಷಯಾಂತರ ಮಾಡುತ್ತಾ
ವಿಶ್ವವೇ ಬೇಡವಾಗಿತ್ತು..!

ಪರಿಮಳ ಸೂಸುವಿಕೆ ಇಲ್ಲದೆ
ಓ ಹಂಬಲವೇ ಬಂಧಿಸಿದೇಗೆ
ಕೇವಲ ಕಣ್‌ ಪರದೆಯಲಿ
ದೇಹವೇ ಭಾರವಾದ ಕ್ಷಣದಲಿ
ಭಾವವೂ ತಣ್ಣಗಾಗಿಸಿ
ನಿಷ್ಟುರದ ಆಸೆಗೆ
ನಿಶ್ಚಯದ ಕನಸು ಕಟ್ಟಿಸಿದೆ
ಇದು ಸ್ವಾರ್ಥ ಅಲ್ಲ
ಆಸೆಯೂ ಅಲ್ಲ
ಆಸೆ ಆಕಾಂಕ್ಷೆ ಮೀರಿದ ಪ್ರೀತಿ...!
ಅದುವೂ ಅಲ್ಲ
ಅದನ್ನು ಮೀರಿದಿದೇನೊ
ಅದನ್ನು ಮೀರಿದಿದೇನೊ...!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.