ADVERTISEMENT

ಕ್ಯೂ8 ಸೆಲೆಬ್ರೇಷನ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 19:30 IST
Last Updated 12 ಅಕ್ಟೋಬರ್ 2020, 19:30 IST
ಔಡಿ ಕ್ಯೂ8 ಸೆಲೆಬ್ರೇಷನ್
ಔಡಿ ಕ್ಯೂ8 ಸೆಲೆಬ್ರೇಷನ್   

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ, ‘ಕ್ಯೂ8ಸೆಲೆಬ್ರೇಷನ್’ ಹೆಸರಿನ ಹೊಸ ಮಾದರಿಯ ಕಾರನ್ನು ಭಾರತದಲ್ಲಿಬಿಡುಗಡೆಮಾಡಿದೆ. ಈ ಕಾರಿನ ಎಕ್ಸ್–ಷೋರೂಂ ಬೆಲೆ
₹ 98.98 ಲಕ್ಷ. ದಸರಾ ಮತ್ತು ದೀಪಾವಳಿ ಹಬ್ಬಗಳ ಹೊತ್ತಿನಲ್ಲಿ ಕಂಪನಿಯು ಈ ಕಾರನ್ನು ಮಾರುಕಟ್ಟೆಗೆ ತಂದಿದೆ.

ಈ ಕಾರು 3 ಲೀಟರ್ ಸಾಮರ್ಥ್ಯದ ಎಂಜಿನ್ ಹೊಂದಿದೆ. ಕೇವಲ 5.9 ಸೆಕೆಂಡುಗಳ ಅವಧಿಯಲ್ಲಿ ಪ್ರತಿ ಗಂಟೆಗೆ 100 ಕಿ.ಮೀ. ವೇಗ ತಲುಪುತ್ತದೆ ಎಂದು ಕಂಪನಿ ಹೇಳಿದೆ. ಕಚ್ಚಾ ರಸ್ತೆಗಳಿಗೂ ಸರಿಹೊಂದುವ ರೀತಿಯಲ್ಲಿ ಕಾರಿನ ವಿನ್ಯಾಸ ಇದೆ.

‘ದೇಶದ ಆಟೊಮೊಬೈಲ್‌ ಉದ್ಯಮವು ಈ ಹಬ್ಬಗಳ ಅವಧಿಯಲ್ಲಿ ಹೆಚ್ಚಿನ ಮಾರಾಟವನ್ನು ಕಾಣುತ್ತಿದೆ. ಈಗ ನಾವು ನಮ್ಮ ಕ್ಯೂ ಸರಣಿಯಲ್ಲಿ ಹೊಸದಾದ ಒಂದು ಕಾರನ್ನು ಪರಿಚಯಿಸುತ್ತಿದ್ದೇವೆ. ಈ ವರ್ಷದ ಜನವರಿಯಲ್ಲಿಕ್ಯೂ8ಕಾರನ್ನು ಮೊದಲ ಬಾರಿಗೆಬಿಡುಗಡೆಮಾಡಲಾಗಿತ್ತು. ಅಂದಿನಿಂದಲೂ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈಕ್ಯೂ8ಸೆಲೆಬ್ರೇಷನ್ಕಾರಿನ ಬಿಡುಗಡೆಯ ಕಾರಣದಿಂದಾಗಿ, ಕ್ಯೂ ಸರಣಿ ಕುರಿತು ಜನರಿಗೆ ಇರುವ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ ಎಂಬ ನಂಬಿಕೆ ನಮಗಿದೆ’ ಎಂದು ಔಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

ADVERTISEMENT

ಸನ್‌ರೂಫ್‌, ಎಂಟು ಏರ್‌ಬ್ಯಾಗ್‌ಗಳು, ಪಾರ್ಕಿಂಗ್ ಅಸಿಸ್ಟ್ ವ್ಯವಸ್ಥೆ, ಎಲ್‌ಇಡಿ ಹೆಡ್‌ಲ್ಯಾಂಪ್‌ ಸೇರಿದಂತೆ ಹಲವು ವೈಶಿಷ್ಟ್ಯಗಳು ಈ ಕಾರಿನಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.