ADVERTISEMENT

ಮಾರುತಿ ಕಾರು ಬೆಲೆ ಗರಿಷ್ಠ ₹ 22,500ರ ವರೆಗೆ ಹೆಚ್ಚಳ

ಪಿಟಿಐ
Published 16 ಏಪ್ರಿಲ್ 2021, 10:25 IST
Last Updated 16 ಏಪ್ರಿಲ್ 2021, 10:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ, ತನ್ನ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗರಿಷ್ಠ ₹ 22,500ರವರೆಗೆ ಹೆಚ್ಚಳ ಮಾಡಿದೆ. ತಯಾರಿಕಾ ವೆಚ್ಚ ಹೆಚ್ಚಿದ ಕಾರಣದಿಂದಾಗಿ ಬೆಲೆ ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿದೆ.

ಸೆಲೆರಿಯೊ ಮತ್ತು ಸ್ವಿಫ್ಟ್‌ ಮಾದರಿಗಳನ್ನು ಹೊರತುಪಡಿಸಿ ಇತರ ಎಲ್ಲ ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಆಗಲಿದೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಮಾರುತಿ ಸುಜುಕಿ ಕಂಪನಿಯು ₹ 2.99 ಲಕ್ಷ ಬೆಲೆಯ ಆಲ್ಟೊದಿಂದ ಆರಂಭಿಸಿ ₹ 12.39 ಲಕ್ಷ ಬೆಲೆಯ (ದೆಹಲಿಯ ಎಕ್ಸ್‌–ಷೋರೂಂ ಬೆಲೆ) ಎಸ್‌–ಕ್ರಾಸ್‌ವರೆಗೆ ಬೇರೆ ಬೇರೆ ಮಾದರಿಯ ಕಾರುಗಳನ್ನು ತಯಾರಿಸುತ್ತಿದೆ.

ತಯಾರಿಕಾ ವೆಚ್ಚದಲ್ಲಿ ಆದ ಹೆಚ್ಚಳದ ಕಾರಣದಿಂದಾಗಿ ಕಂಪನಿಯ ಕಾರುಗಳ ಬೆಲೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತಿದೆ ಎಂದು ಮಾರುತಿ ಸುಜುಕಿ ಮಾರ್ಚ್‌ ತಿಂಗಳಲ್ಲಿ ಹೇಳಿತ್ತು. ಈ ವರ್ಷದ ಜನವರಿಯಲ್ಲಿ ಕಂಪನಿಯು ಕೆಲವು ಮಾದರಿಯ ಕಾರುಗಳ ಬೆಲೆಯನ್ನು ಗರಿಷ್ಠ ₹ 34 ಸಾವಿರದವರೆಗೆ ಹೆಚ್ಚಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.