ADVERTISEMENT

ಪ್ರಯಾಣಿಕ ವಾಹನ ರಿಟೇಲ್‌ ಮಾರಾಟ ಶೇ 10.59ರಷ್ಟು ಏರಿಕೆ

ಪಿಟಿಐ
Published 9 ಮಾರ್ಚ್ 2021, 11:47 IST
Last Updated 9 ಮಾರ್ಚ್ 2021, 11:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟವು ಫೆಬ್ರುವರಿಯಲ್ಲಿ ಶೇಕಡ 10.59ರಷ್ಟು ಏರಿಕೆಯಾಗಿದ್ದು 2.54 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟವು (ಎಫ್‌ಎಡಿಎ) ಮಂಗಳವಾರ ತಿಳಿಸಿದೆ.

ದ್ವಿಚಕ್ರವಾಹನ ಮಾರಾಟವು ಶೇ 16ರಷ್ಟು ಇಳಿಕೆ ಆಗಿದ್ದು 10.91 ಲಕ್ಷಕ್ಕೆ ತಲುಪಿದೆ. 2020ರ ಫೆಬ್ರುವರಿಯಲ್ಲಿ 13 ಲಕ್ಷ ವಾಹನಗಳು ಮಾರಾಟವಾಗಿದ್ದವು.

ವಾಣಿಜ್ಯ ವಾಹನಗಳ ಮಾರಾಟ ಶೇ 29.53ರಷ್ಟು ಕಡಿಮೆಯಾಗಿದೆ. ಅಂತೆಯೇ ತ್ರಿಚಕ್ರವಾಹನಗಳ ಮಾರಾಟ ಶೇ 50ರಷ್ಟು ಇಳಿಕೆ ಕಂಡಿದೆ. ಟ್ರ್ಯಾಕ್ಟರ್‌ ಮಾರಾಟ ಶೇ 18.89ರಷ್ಟು ಏರಿಕೆಯಾಗಿದೆ. ಎಲ್ಲಾ ವಿಭಾಗಗಳನ್ನೂ ಒಳಗೊಂಡು ಒಟ್ಟಾರೆ ಮಾರಾಟವು 13.43ರಷ್ಟು ಇಳಿಕೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.