ADVERTISEMENT

ತೆರಿಗೆ ಹೊರೆ ಕಡಿಮೆ ಮಾಡುವುದು ಹೇಗೆ?

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 19:30 IST
Last Updated 30 ಏಪ್ರಿಲ್ 2019, 19:30 IST
ಪುರಾಣಿಕ್
ಪುರಾಣಿಕ್   

ನಾನು ಗೃಹಿಣಿ. ಪತಿ ಸಾಫ್ಟ್‌ವೇರ್‌ ಎಂಜಿನಿಯರ್‌. ನನ್ನ ವಯಸ್ಸು 38. ನನ್ನ ಬಳಿ₹ 90 ಲಕ್ಷವಿದ್ದು,₹ 60 ಲಕ್ಷ NSE KVE MIS NPSನಲ್ಲಿ ತೊಡಗಿಸಿದ್ದೇನೆ. ಉಳಿದ ಹಣ₹ 30 ಲಕ್ಷ SBI ನಲ್ಲಿ RD ಮಾಡಿರುವೆ. ನನ್ನ‍ಪ್ರಶ್ನೆ: 1) ನಾನು ಮೊದಲ ಬಾರಿಗೆ 2017–18ರಲ್ಲಿ ಐಟಿ ರಿಟರ್ನ್ ತುಂಬಿರುವೆ. 15G ಕೊಡುವುದು ಬೇಡ ಎಂದು ಆಡಿಟರ್ ಹೇಳಿದ್ದಾರೆ. ಇದರಿಂದ ಶೇ 10 ರಷ್ಟು ಬಡ್ಡಿಯಲ್ಲಿ ಕಡಿತವಾಗಿದೆ. ಈ ಹಣ ಹೇಗೆ ವಾಪಸು ಪಡೆಯಬಹುದು ತಿಳಿಸಿರಿ. 2) ತೆರಿಗೆ ಹೊರೆ ಕಡಿಮೆ ಮಾಡುವ ವಿಧಾನ ತಿಳಿಸಿರಿ. 3) ಒಳ್ಳೆಯ ಹೂಡಿಕೆ ತಿಳಿಸಿರಿ. 4) ಸ್ಥಿರ ಆಸ್ತಿ ಮ್ಯೂಚುವಲ್ ಫಂಡಿನಲ್ಲಿ ಹೂಡಲು ಸಲಹೆ ನೀಡಿರಿ.
-ಹೆಸರು, ಊರು ಬೇಡ

ಉತ್ತರ: ನೀವು ಇದುವರೆಗೆ ಮಾಡಿರುವ ಹೂಡಿಕೆ ಚೆನ್ನಾಗಿದೆ ಹಾಗೂ ಕಂಟಕ ರಹಿತವಾಗಿದ್ದು. ನೀವು ಆದಾಯ ತೆರಿಗೆಗೆ ಒಳಗಾಗುವುದರಿಂದ 15G ನಮೂನೆ ಫಾರಂ ಕೊಡುವಂತಿಲ್ಲ.

ತೆರಿಗೆ ಶೇ 10 ಮುರಿದಿರುವುದಕ್ಕೆ ಬ್ಯಾಂಕು ಹಾಗೂ ಅಂಚೆ ಕಚೇರಿಗಳಲ್ಲಿ ಫಾರಂ ನಂಬರ್ 16A ಪಡೆದು ಆಡಿಟರ್‌ಗೆ ಕೊಡಿರಿ. ಐ.ಟಿ ರಿಟರ್ನ್‌ ತುಂಬುವಾಗ ಈ ಮಾಹಿತಿ ಬೇಕಾಗುತ್ತದೆ. ನೀವು ಕೊಡಬೇಕಾದ ಒಟ್ಟು ತೆರಿಗೆಯಲ್ಲಿ, ಇಲ್ಲಿ ಮುರಿದ
ಶೇ 10 ಕಳೆದು ಉಳಿದ ತೆರಿಗೆ ಸಲ್ಲಿಸಿರಿ.

ADVERTISEMENT

ತೆರಿಗೆ ಹೊರೆ ಕಡಿಮೆ ಮಾಡಲು ಸೆಕ್ಷನ್‌ 80C ಆಧಾರದ ಮೇಲೆ ಪ್ರತ್ಯೇಕವಾಗಿ₹ 1.50 ಲಕ್ಷSBI ನಲ್ಲಿ ಠೇವಣಿ ಮಾಡಿರಿ ಹಾಗೂ ಸೆಕ್ಷನ್ 80CCD (1B) ಆಧಾರದ ಮೇಲೆ NPS ಗರಿಷ್ಠ ₹ 50,000 ವಾರ್ಷಿಕವಾಗಿ ತುಂಬಿರಿ. ಇವೆರಡರಿಂದ ನಿಮ್ಮ ಒಟ್ಟು ಆದಾಯದಿಂದ ವಾರ್ಷಿಕವಾಗಿ ₹ 2 ಲಕ್ಷ ಕಳೆದು ತೆರಿಗೆ ಸಲ್ಲಿಸಬಹುದು. ಸದ್ಯಕ್ಕೆ ಮ್ಯೂಚುವಲ್‌ ಫಂಡ್‌ ಹೂಡಿಕೆ ಮುಂದಕ್ಕೆ ಹಾಕಿ. ಈಗ ಸಂವೇದಿ ಸೂಚ್ಯಂಕ ಗಗನಕ್ಕೇರಿದ್ದು, ನಿಮ್ಮ ಹೂಡಿಕೆಗೆ ತಕ್ಕ ಪ್ರತಿಫಲ ಸಿಗಲಾರದು. ಮುಂದೆ ಸೂಚ್ಯಂಕ ಕೆಳಗೆ ಬಂದಾಗ ಹೂಡಿಕೆ ಮಾಡಿ.

**
ನನ್ನೊಡನೆ ₹ 25 ಲಕ್ಷ ಉಳಿತಾಯದ ಹಣವಿದೆ. ನನಗೆ‍ಪ್ರತೀ ತಿಂಗಳು ಬಡ್ಡಿ ಬೇಕಾಗಿದೆ. ನಾನು ಇನ್ನೂ ಹಿರಿಯ ನಾಗರಿಕನಾಗಿಲ್ಲ. ನನಗೆ ಉತ್ತಮ ಮಾರ್ಗದರ್ಶನ ಮಾಡಿರಿ. ನನಗೆ ಬೇರಾವ ಆದಾಯವಿಲ್ಲ.
-ಶ್ರೀನಿವಾಸ್‌, ಬೆಂಗಳೂರು

ಉತ್ತರ: ನೀವು ₹ 15 ಲಕ್ಷ ಅಂಚೆ ಕಚೇರಿಯಲ್ಲಿ Monthly income Schemeನಲ್ಲಿ ತೊಡಗಿಸಿ. ಪ್ರತೀ ತಿಂಗಳೂ ಬಡ್ಡಿ ಪಡೆಯಿರಿ. ಸದ್ಯದ ಬಡ್ಡಿದರ ಶೇ 7.7 ಇರುತ್ತದೆ. ಉಳಿದ ₹ 10 ಲಕ್ಷ ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ FD ಮಾಡಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ.

ಪ್ರತೀ ತಿಂಗಳೂ ಪಡೆಯಬಹುದಾದರೂ, ಮೂಲ ಬಡ್ಡಿದರದಲ್ಲಿ ಸ್ವಲ್ಪ ಕಡಿತ ಮಾಡಿ ಕೊಡುತ್ತಾರೆ. ಈ ಮಾರ್ಗಕ್ಕಿಂತ ಮಿಗಿಲಾದ ಮಾರ್ಗ ಬೇರೊಂದಿಲ್ಲ. ನಿಮ್ಮ ವಾರ್ಷಿಕ ಆದಾಯ ₹ 2.50 ಲಕ್ಷದೊಳಗಿದ್ದು, ನಿಮಗೆ ಬೇರಾವ ಆದಾಯ ಇಲ್ಲದೇ ಇದ್ದಲ್ಲಿ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್‌ ಸಲ್ಲಿಸುವ ಅಗತ್ಯ ಇಲ್ಲ. 2019–20ರ ಹಣಕಾಸು ವರ್ಷದಲ್ಲಿ (1–4–2019 ರಿಂದ 31–3–2020) ₹ 5 ಲಕ್ಷ ಆದಾಯ ಬಂದರೂ ತೆರಿಗೆ ಬರುವುದಿಲ್ಲ. ಒಟ್ಟಿನಲ್ಲಿ ನಿಮಗೆ ತೆರಿಗೆ ಭಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.