ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಚೇತರಿಕೆ

ಪಿಟಿಐ
Published 21 ಸೆಪ್ಟೆಂಬರ್ 2021, 16:37 IST
Last Updated 21 ಸೆಪ್ಟೆಂಬರ್ 2021, 16:37 IST

ಮುಂಬೈ: ದೇಶದ ಷೇರುಪೇಟೆಗಳು ಮಂಗಳವಾರ ಚೇತರಿಕೆ ಹಾದಿಗೆ ಮರಳಿದವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 515 ಅಂಶ ಏರಿಕೆ ಕಂಡು 59,005 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 165 ಅಂಶ ಹೆಚ್ಚಾಗಿ 17,562 ಅಂಶಗಳಿಗೆ ಏರಿಕೆ ಕಂಡಿತು.

ಐ.ಟಿ., ಔಷಧ ಹಾಗೂ ಎಫ್‌ಎಂಸಿಜಿ ವಲಯಗಳ ಷೇರು ಮೌಲ್ಯ ಹೆಚ್ಚಳದಿಂದಾಗಿ ದೇಶಿ ಷೇರುಪೇಟೆಗಳು ಉತ್ತಮ ಚೇತರಿಕೆ ಕಂಡುಕೊಂಡವು ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT