ADVERTISEMENT

ಒಂದೇ ದಿನ 2 ಪರೀಕ್ಷೆ: ಅಭ್ಯರ್ಥಿಗಳಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 19:37 IST
Last Updated 16 ಫೆಬ್ರುವರಿ 2022, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಕೆಪಿಎಸ್‌ಸಿ ಹಾಗೂ ಕೆಇಎ ಪರೀಕ್ಷೆಗಳು ಒಂದೇ ದಿನ ಅಂದರೆಮಾರ್ಚ್ 12ರಂದು ನಿಗದಿಯಾಗಿರುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಒಂದು ಪರೀಕ್ಷೆಗೆ ಹಾಜರಾದರೆ, ಮತ್ತೊಂದು ಅವಕಾಶ ಕೈತಪ್ಪುವ ಭೀತಿಯಲ್ಲಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡ ಅಭ್ಯರ್ಥಿಯೊಬ್ಬರು, ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸರ್ಕಾರಿ ನೌಕರರ ಇಲಾಖೆ ಪರೀಕ್ಷೆಯನ್ನು ಮಾರ್ಚ್‌ 7ರಿಂದ 12ರವರೆಗೆ ನಿಗದಿಪಡಿಸಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಾರ್ಚ್ 12ರಿಂದ 16ರವರೆಗೆ ಪರೀಕ್ಷೆ ನಿಗದಿಗೊಳಿಸಿದೆ. ಏಕಕಾಲಕ್ಕೆ ಎರಡೂ ಪರೀಕ್ಷೆ ಇರುವುದರಿಂದ ಇಕ್ಕಟ್ಟಿಗೆ ಸಿಲುಕಿದ್ದೇವೆ’ ಎಂದು ತಿಳಿಸಿದರು.

‘ಕೆಪಿಎಸ್‌ಸಿಯವರು ಒಂದು ತಿಂಗಳ ಮುಂಚೆಯೇ ನಿಗದಿಪಡಿಸಿದ್ದಾರೆ. ಆದರೆ, ಕೆಇಎ ಫೆ.15ರಂದು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ, ಮಾರ್ಚ್‌ 12ರಂದು ನಡೆಯಲಿರುವ ಪರೀಕ್ಷೆಯನ್ನು ಮುಂದೂಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT