ADVERTISEMENT

ಗಾಂಧಿ ವಿಚಾರ ವೇದಿಕೆ: ಮುಂಡಾಜೆಯಲ್ಲಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 16:32 IST
Last Updated 16 ಸೆಪ್ಟೆಂಬರ್ 2021, 16:32 IST
ಗಾಂಧಿ ವಿಚಾರ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶರತ್‍ಕೃಷ್ಣ ಪಡ್ವೆಟ್ನಾಯ ಮಾತನಾಡಿದರು. ಶಶಿಧರ ಠೋಸರ್, ಶ್ರೀಧರ ಜಿ. ಭಿಡೆ, ದೇವಿಪ್ರಸಾದ್ ಮತ್ತು ಅರವಿಂದ ಚೊಕ್ಕಾಡಿ ಉಪಸ್ಥಿತರಿದ್ದರು 
ಗಾಂಧಿ ವಿಚಾರ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶರತ್‍ಕೃಷ್ಣ ಪಡ್ವೆಟ್ನಾಯ ಮಾತನಾಡಿದರು. ಶಶಿಧರ ಠೋಸರ್, ಶ್ರೀಧರ ಜಿ. ಭಿಡೆ, ದೇವಿಪ್ರಸಾದ್ ಮತ್ತು ಅರವಿಂದ ಚೊಕ್ಕಾಡಿ ಉಪಸ್ಥಿತರಿದ್ದರು    

ಉಜಿರೆ: ಗಾಂಧಿ ವಿಚಾರ ವೇದಿಕೆಯ ಬೆಳ್ತಂಗಡಿ ತಾಲ್ಲೂಕು ಘಟಕದ ಅಧ್ಯಕ್ಷ ಶರತ್‍ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ ಗುರುವಾರ ಉಜಿರೆಯಲ್ಲಿ ಸಮಲೋಚನಾ ಸಭೆ ನಡೆಸಲಾಯಿತು.

ವೇದಿಕೆಯ ಬೆಳ್ತಂಗಡಿ ತಾಲ್ಲೂಕು ಘಟಕವನ್ನು ಅಕ್ಟೋಬರ್ 2 ರಂದು ಶನಿವಾರ ಮುಂಡಾಜೆಯಲ್ಲಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಉದ್ಘಾಟಿಸಲು ನಿರ್ಧರಿಸಲಾಯಿತು.

1948 ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ ಅವರ ಚಿತಾಭಸ್ಮವನ್ನು ಹಾಕಿ ಮುಂಡಾಜೆಯಲ್ಲಿ ಅಂದು ನೆಟ್ಟ ಆಲದ ಮರದ ವಠಾರದಲ್ಲಿ ‘ಗಾಂಧಿವನ’ ನಿರ್ಮಿಸಲು ನಿರ್ಧರಿಸಲಾಯಿತು.

ADVERTISEMENT

ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಪ್ರಧಾನ ಕಾರ್ಯಾಧ್ಯಕ್ಷ ದೇವಿಪ್ರಸಾದ್, ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಅತುಲ್ ದಾಮ್ಲೆ, ಶಶಿಧರ ಠೋಸರ್, ಮಾಜಿ ಸೈನಿಕ ಕಾಂಚೋಡು ಗೋಪಾಲಕೃಷ್ಣ, ವಿದ್ಯಾಕುಮಾರ್, ವಿನುತಾ ರಜತ್ ಗೌಡ, ಅಶ್ರಫ್ ಆಲಿ ಕುಂಞ ಮೊದಲಾದವರು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.