ADVERTISEMENT

ಹಾವೇರಿ: ಹಾಡುಗಳ ಮೂಲಕ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 3 ಮೇ 2020, 16:11 IST
Last Updated 3 ಮೇ 2020, 16:11 IST
ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅವರ ನಿಧನಕ್ಕೆ ಹಾಡುಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಸಭೆ ಹಾವೇರಿಯ ಗೆಳೆಯರ ಬಳಗದ ಆವರಣದಲ್ಲಿ ಭಾನುವಾರ ನಡೆಯಿತು
ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅವರ ನಿಧನಕ್ಕೆ ಹಾಡುಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಸಭೆ ಹಾವೇರಿಯ ಗೆಳೆಯರ ಬಳಗದ ಆವರಣದಲ್ಲಿ ಭಾನುವಾರ ನಡೆಯಿತು   

ಹಾವೇರಿ: ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅವರ ನಿಧನಕ್ಕೆ ಹಾಡುಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಸಭೆ ಇಲ್ಲಿನ ಗೆಳೆಯರ ಬಳಗದ ಆವರಣದಲ್ಲಿ ಭಾನುವಾರ ನಡೆಯಿತು.

ತಾಲ್ಲೂಕಾ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಸರಳ ಶ್ರದ್ಧಾಂಜಲಿ ಸಭೆಯು ಕವಿ ನಿಸಾರ ಅಹಮದ್‌ ಅವರು ಮಾನವೀಯ ಪ್ರೀತಿಯ ಕವಿ ಎಂದು ಒಕ್ಕೊರಲಿನಿಂದ ಗುಣಗಾನ ಮಾಡಿತು.

ಕನ್ನಡ ನವ್ಯ ಕಾವ್ಯದ ಸಂದರ್ಭದಲ್ಲಿ ನವೋದಯ ಕಾವ್ಯದ ಭಾವಲೋಕವನ್ನು ತುಂಬಿ ಎಲ್ಲ ಕಾಲಘಟ್ಟದಲ್ಲಿಯೂ ಕಾವ್ಯ ರಸಿಕರ ಪ್ರೀತಿಗೆ ಪಾತ್ರರಾದ ಕವಿ ಬಣ್ಣಿಸಲಾಯಿತು. ನಿತ್ಯೋತ್ಸವ ಹಾಡು ಕಾಲ–ಕಾಲಕ್ಕೂ ಕನ್ನಡನಾಡಿನ ಪ್ರಕೃತಿ ವರ್ಣನೆ ಮತ್ತು ಅದರ ವೈಭವವನ್ನು ಸಾರುವ ಹಾಡೆಂದು ಸಭೆಯ ಪ್ರತಿಯೊಬ್ಬರ ನುಡಿಯಾಗಿತ್ತು.

ADVERTISEMENT

ಕಲಾಬಳಗದ ಕೆ.ಆರ್. ಹಿರೇಮಠ ಎ.ಬಿ.ಗುಡ್ಡಳ್ಳಿ, ಆರ್.ಸಿ.ನಂದೀಹಳ್ಳಿ ನಿಸಾರ ಅಹಮದ್‌ ಅವರ ನಿತ್ಯೋತ್ಸವ ಒಳಗೊಂಡಂತೆ ಕೆಲವು ಹಾಡುಗಳನ್ನು ಹಾಡಿದರು.

ಹಿರಿಯ ಕವಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ ಆಲದಕಟ್ಟಿ, ಸಿ.ಎಸ್. ಮರಳಿಹಳ್ಳಿ, ಶಂಕರ ಬಡಿಗೇರ, ರೇಣುಕಾ ಗುಡಿಮನಿ, ಎಸ್. ಆರ್ ಹಿರೇಮಠ, ನಾಗರಾಜ ನಡುವಿನಮಠ, ಶಂಕರ ಸುತಾರ, ಎನ್‌.ಬಿ. ಕಾಳೆ, ಅಕ್ಷಯ ಸಣ್ಣಂಗಿ ಶಿವಬಸವ ಮರಳಿಹಳ್ಳಿ, ಜಿ.ಎಂ. ಓಂಕಾರಣ್ಣನವರ ಭಾಗವಹಿಸಿದ್ದರು.

ಒಂದು ನಿಮಿಷದ ಮೌನದೊಂದಿಗೆ ಸಭೆ ಮುಕ್ತಾಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.