ADVERTISEMENT

ಮಂಗಳೂರು: ಉಚಿತ ಆಂಬುಲೆನ್ಸ್ ಸೇವೆಗೆ ನಳಿನ್‌ ಕುಮಾರ್‌ ಕಟೀಲ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 11:50 IST
Last Updated 6 ಜೂನ್ 2021, 11:50 IST
ಮಂಗಳೂರಿನ ಇನ್ವೆಂಜರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕೋವಿಡ್ ಬಾಧಿತ ಬಡ ಮತ್ತು ನಿರ್ಗತಿಕ ರೋಗಿಗಳಿಗೆ ತುರ್ತು ಆಸ್ಪತ್ರೆ ಸಾರಿಗೆಗಾಗಿ ನೀಡಿದ 24/7 ಉಚಿತ ಆಂಬ್ಯುಲೆನ್ಸ್‌ಗೆ ಸಂಸದ ನಳಿನ್ ಕುಮಾರ್ ಕಟೀಲ್ ಶನಿವಾರ ಚಾಲನೆ ನೀಡಿದರು.
ಮಂಗಳೂರಿನ ಇನ್ವೆಂಜರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕೋವಿಡ್ ಬಾಧಿತ ಬಡ ಮತ್ತು ನಿರ್ಗತಿಕ ರೋಗಿಗಳಿಗೆ ತುರ್ತು ಆಸ್ಪತ್ರೆ ಸಾರಿಗೆಗಾಗಿ ನೀಡಿದ 24/7 ಉಚಿತ ಆಂಬ್ಯುಲೆನ್ಸ್‌ಗೆ ಸಂಸದ ನಳಿನ್ ಕುಮಾರ್ ಕಟೀಲ್ ಶನಿವಾರ ಚಾಲನೆ ನೀಡಿದರು.   

ಮಂಗಳೂರು: ಕೋವಿಡ್ ಬಾಧಿತ ಬಡ ಮತ್ತು ಆರ್ಥಿಕವಾಗಿ ತೊಂದರೆಯಲ್ಲಿರುವ ರೋಗಿಗಳಿಗೆ ತುರ್ತು ಆಸ್ಪತ್ರೆ ಸಾರಿಗೆಗಾಗಿ ನಗರದ ಇನ್ವೆಂಜರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನೀಡಿದ 24/7 ಉಚಿತ ಆಂಬ್ಯುಲೆನ್ಸ್‌ಗೆ ಸಂಸದ ನಳಿನ್ ಕುಮಾರ್ ಕಟೀಲ್ ಶನಿವಾರ ಚಾಲನೆ ನೀಡಿದರು.

ನಗರದ ಕೊಟ್ಟಾರದಲ್ಲಿ ಕಚೇರಿ ಹೊಂದಿರುವ ಇನ್ವೆಂಜರ್ ಟೆಕ್ನಾಲಜೀಸ್ ಜಾಗತಿಕ ಐಟಿ ಸೇವಾ ಪೂರೈಕೆ ಸಂಸ್ಥೆಯಾಗಿದ್ದು, ಎನ್‍ಜಿಒಗಳಾದ ಇನ್ವೆಂಜರ್ ಪ್ರತಿಷ್ಠಾನ ಮತ್ತು ಅಮೆರಿಕದ ಕೀಥನ್ ಕೀಶಾ ಪ್ರತಿಷ್ಠಾನ ಆಶ್ರಯದಲ್ಲಿ ನೀಡಿದ ಅತ್ಯಾಧುನಿಕ ಆಂಬ್ಯುಲೆನ್ಸ್ ನಲ್ಲಿ ಆಧುನಿಕ ಜೀವರಕ್ಷಕ ಉಪಕರಣಗಳು ಮತ್ತು ಆಮ್ಲಜನಕ ಒದಗಿಸಲಾಗಿದೆ. ಚಾಲಕ, ಇಂಧನ ಮತ್ತು ನಿರ್ವಹಣೆಯ ವೆಚ್ಚವನ್ನು ಇನ್ವೆಂಜರ್ ಟೆಕ್ನಾಲಜೀಸ್ ಕೋವಿಡ್ ಅವಧಿಯಲ್ಲಿ ಪೂರೈಸುತ್ತದೆ. ಸೇವೆಯನ್ನು ಪಡೆಯಲು ನಾಗರಿಕರು ಎಂಸಿಸಿ ನಿಯಂತ್ರಣ ಕೊಠಡಿ ಸಂಪರ್ಕ ಸಂಖ್ಯೆಗಳು 0824-2220306 (ಲ್ಯಾಂಡ್‍ಲೈನ್), 9449007722 (ಮೊಬೈಲ್) ಅಥವಾ ಆಂಬ್ಯುಲೆನ್ಸ್ ಚಾಲಕ 9845394838 (ಮೊಬೈಲ್) ಇವರಿಗೆ ಕರೆ ಮಾಡಬಹುದು. ಕಾರ್ಯಕ್ರಮದಲ್ಲಿ

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಆಯುಕ್ತ ಅಕ್ಷಯ್‌ ಶ್ರೀಧರ್, ಜಂಟಿ ಆಯುಕ್ತ ಸಂತೋಷ್‌ ಕುಮಾರ್, ಪಾಲಿಕೆ ಸದಸ್ಯರಾದ ಲೀಲಾವತಿ ಪ್ರಕಾಶ್, ಡಾ.ಸುಜಯ್ ಭಂಢಾರಿ, ಇನ್ವೆಂಜರ್ ಪ್ರತಿಷ್ಠಾನ ಅಧ್ಯಕ್ಷ ಕೆ.ಸತ್ಯೇಂದ್ರ ಪೈ, ಮಹಾ ಪ್ರಬಂಧಕ ನರಸಿಂಹ ಮಲ್ಯ, ಉದ್ಯಮಿ ಡಿ. ವಾಸುದೇವ್ ಕಾಮತ್, ಹರೀಶ್ ಕಾಮತ್, ಅನಿಲ್ ಸಾಲಿಯನ್ ಮತ್ತು ಮೋಹನ್ ಪೇಡ್ರೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.