ADVERTISEMENT

₹ 99,999 ವಂಚನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 14:57 IST
Last Updated 19 ಸೆಪ್ಟೆಂಬರ್ 2021, 14:57 IST

ನಂಜನಗೂಡು: ನಗರದ ನಿವಾಸಿಯೊಬ್ಬರಿಗೆ ವಂಚಕರು ₹ 99,999 ವಂಚಿಸಿದ್ದಾರೆ.

ಇಲ್ಲಿನ ನೀಲಕಂಠ ನಗರ ಬಡಾವಣೆಯ ಎರಡನೇ ಕ್ರಾಸ್ ನಿವಾಸಿ ಬಷೀರ್ ಅಹಮದ್ ವಂಚನೆಗೊಳಗಾದವರು.

ಇವರು ನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಇವರ ಪತ್ನಿ ಶಹಜಹಾನ್ ಎಂಬುವರ ಮೊಬೈಲ್‍ಗೆ ಕರೆ ಮಾಡಿದ್ದ ವಂಚಕರು ಹಿಂದಿಯಲ್ಲಿ ಮಾತನಾಡಿ ವಂಚಿಸಿದ್ದಾರೆ.

ADVERTISEMENT

ಸ್ಟೇಟ್ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಹೊಸದಾಗಿ ಎಟಿಎಂ ಕಾರ್ಡ್ ನೀಡಬೇಕು. ಹಳೆಯ ಎಟಿಎಂ ಕಾರ್ಡ್ ನಂಬರ್, ವ್ಯಾಲಿಡಿಟಿ ಮಾಹಿತಿ, ಸಿವಿವಿ ನಂಬರ್ ವಿವರವನ್ನು ಕೇಳಿದ್ದಾರೆ. ಕೆಲ ಹೊತ್ತಿನ ನಂತರ ಮೊಬೈಲ್‌ಗೆ ಒಟಿಪಿ ಬಂದಿದೆ. ಈ ನಂಬರ್‌ ಪಡೆದ ವಂಚಕರು ₹ 99,999 ಹಣವನ್ನು ಬಷೀರ್‌ ಖಾತೆಯಿಂದ ಪಡೆದಿದ್ದಾರೆ.

ಹಣ ಜಮೆಯಾದ ಸಂದೇಶ ಮೊಬೈಲ್‌ಗೆ ಬರುತ್ತಿದ್ದಂತೆ ಅನುಮಾನದಿಂದ ವಂಚಕರು ಕರೆ ಮಾಡಿದ್ದ ನಂಬರ್‌ಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ.

ಹಣ ಕಳೆದುಕೊಂಡ ಬಷೀರ್‌ ವಂಚಕರನ್ನು ಪತ್ತೆ ಹಚ್ಚಿ, ತಮ್ಮ ಹಣ ವಾಪಸ್ ಕೊಡಿಸಿಕೊಡುವಂತೆ ಮೈಸೂರಿನ ಸೈಬರ್‌ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.