ADVERTISEMENT

‘ನಿಂತ ನೀರಾದ ವಚನ ಅಧ್ಯಯನ’

ಸಿಐಐಎಲ್‌ ವೆಬಿನಾರ್‌: ಡಾ.ವಿಜಯಕುಮಾರ್‌ ಎಂ. ಬೋರಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 6:06 IST
Last Updated 16 ಸೆಪ್ಟೆಂಬರ್ 2021, 6:06 IST
ಡಾ.ವಿಜಯ ಕುಮಾರ್‌ ಎಂ. ಬೋರಟ್ಟಿ
ಡಾ.ವಿಜಯ ಕುಮಾರ್‌ ಎಂ. ಬೋರಟ್ಟಿ   

ಮೈಸೂರು:‘ವಚನಗಳ ಕುರಿತ ಚರ್ಚೆಗಳು ಪುನರಾವರ್ತನೆಯಾಗುತ್ತಿದ್ದು, ಹೊಸ ಅಧ್ಯಯನವು ನಿಂತ ನೀರಾಗಿದೆ’ ಎಂದು ಮೈಸೂರು ವಿಶ್ವವಿದ್ಯಾಲಯ ಸಂಜೆ ಕಾಲೇಜಿನ ವಿಜಯಕುಮಾರ್‌ ಎಂ. ಬೋರಟ್ಟಿ ಪ್ರತಿಪಾದಿಸಿದರು.

ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಬುಧವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ‘ಲಿಂಗಾಯತ ಮತ್ತು ವಿಚಾರ, ವಚನಗಳು, ಕ್ರಿಶ್ಚಿಯಾನಿಟಿ ಮತ್ತು ವಸಹಾತುಶಾಹಿ ಘಟ್ಟ’ ಕುರಿತು ಅವರು ಮಾತನಾಡಿದರು.‌‌

‘ವಚನಗಳನ್ನು ಸಂಗ್ರಹಿಸಲು ಜೀವನವನ್ನೇ ಮುಡುಪಿಟ್ಟ ವಿದ್ವಾಂಸ ಫ.ಗು.ಹಳಕಟ್ಟಿ ಅವರು ಎದುರಿದ ಸವಾಲುಗಳು ಹಾಗೂ ಅವರ ಸಮುದಾಯ ಎದುರಿಸುತ್ತಿದ್ದ ಸಂಕಷ್ಟಗಳ ಹಿನ್ನೆಲೆಯಲ್ಲಿ ಅಧ್ಯಯನ ನಡೆಯಬೇಕಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಹಳಕಟ್ಟಿ ಪೂರ್ವದ ವಚನ ಪ್ರಕಟಣೆಗಳ ಮೇಲೆ ಹೆಚ್ಚು ಅಧ್ಯಯನ ಆಗಿಲ್ಲ. ವಸಹಾತುಶಾಹಿಯ ಪ್ರಭಾವವು ಪ್ರಕಟಣೆಗಳ ಬಗ್ಗೆ ಮೇಲೆ ಇದೆಯೇ ಎಂಬುದನ್ನು ಸಂಶೋಧಕರು ವಿಶ್ಲೇಷಿಸಿದರೆ ಹೊಸ ಮಾಹಿತಿಗಳು ದೊರೆಯಲಿವೆ’ ಎಂದರು.

‘ಮೊದಲು ವಚನ ಮತ್ತು ಕೀರ್ತನೆಗಳ ಸಂಗ್ರಹಿಸಿ ಅದನ್ನು ಪ್ರಕಟಿಸಿದವರು ಕ್ರೈಸ್ತ ಮಿಷನರಿಗಳು. ಸ್ಥಳೀಯ ವಿಚಾರಗಳನ್ನು ಅರ್ಥೈಸಿಕೊಳ್ಳುವುದರ ಜೊತೆಗೆ ಧರ್ಮ ಪ್ರಸಾರ ಮಾಡುವುದು ಅವರ ನಿಲುವಾಗಿತ್ತು. ಹೀಗಾಗಿಯೇ ವಚನಗಳನ್ನು ಅವರು ಸಂಗ್ರಹಿಸಿದರು. ಪ್ರಕಟಣೆಗಳ ಮೂಲಕ ಸಮಾಜದಲ್ಲಿರುವ ಅವೈಚಾರಿಕತೆಯನ್ನು ತೋರ್ಪಡಿಸಿದರು’ ಎಂದು ಪ್ರತಿಪಾದಿಸಿದರು.

ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮ ಶೆಟ್ಟಿ, ಹಿರಿಯ ಫೆಲೋ ಡಾ.ಚಲಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.