ADVERTISEMENT

ತನಿಷ್ಕ್‌ನಿಂದ ಆಕರ್ಷಕ ಆಭರಣ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 19:45 IST
Last Updated 17 ಫೆಬ್ರುವರಿ 2019, 19:45 IST
ಕಿವಿಯೋಲೆ
ಕಿವಿಯೋಲೆ   

ತನಿಷ್ಕ್‌ ಮಿಯಾ ಸಂಸ್ಥೆ ಇತ್ತೀಚೆಗೆ ವಿನೂತನ ಆಭರಣಗಳ ಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಈ ಆಕರ್ಷಕ ಆಭರಣಗಳು ಫ್ಯಾಷನ್‌ ವಲಯವನ್ನು ಆಕರ್ಷಿಸುವಂತಿವೆ. ಚಾರ್ಮ್ಡ್‌ ಹೆಸರಿನ ಈ ಆಭರಣ ಸಂಗ್ರಹ ಹೆಚ್ಚು ಜನರನ್ನು ಸೆಳೆಯುತ್ತಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಮಹಿಳೆಯರು ಇಷ್ಟಪಡುವಂತಹ ಹೊಸ ವಿನ್ಯಾಸಗಳನ್ನು ಈ ಆಭರಣಗಳು ಹೊಂದಿವೆ. ಧರಿಸುವವರ ಭಾವನೆಗಳಿಗೆ ತಕ್ಕಂತೆ ಆಭರಣಗಳನ್ನು ರೂಪಿಸಲಾಗಿದೆ. ₹1600 ರಿಂದ ಕಿವಿಯೋಲೆಗಳು ಸಿಗಲಿವೆ. ಎಲ್ಲಾ ಮಿಯಾ ಸ್ಟೋರ್ಸ್‌ ಹಾಗೂ ಆನ್‌ಲೈನ್‌ನಲ್ಲೂ ಕೊಳ್ಳಬಹುದು.

ಫ್ಯಾಷನ್‌ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಉದ್ದದ ಕಿವಿಯೋಲೆಗಳನ್ನು ತಯಾರಿಸಲಾಗಿದೆ. ಸೀರೆ, ಸ್ಕರ್ಟ್‌ ಸೇರಿದಂತೆ ವಿವಿಧ ಮಾದರಿಯ ಉಡುಗೆಗಳಿಗೂ ಇವು ಸರಿ ಹೊಂದಲಿವೆ. 14 ಕ್ಯಾರೆಟ್‌ ಚಿನ್ನದಿಂದ ರೂಪಿಸಿದ ಆಭರಣಗಳು 500ಕ್ಕೂ ಹೆಚ್ಚು ವಿನ್ಯಾಸಗಳನ್ನು ಹೊಂದಿವೆ.

**

ADVERTISEMENT

ವಾಯ್ಲಾ ಬ್ರಾಂಡ್ ತನ್ನ ನೂತನ ಸರಣಿ ಆಭರಣಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಪ್ರೇಮಿಗಳ ದಿನದ ಸಂದರ್ಭದಲ್ಲಿ ಫ್ಯಾಷನ್‌ಗೆ ತಕ್ಕ ಆಭರಣಗಳನ್ನು ಈ ಸಂಗ್ರಹ ಹೊಂದಿದೆ.

ಬೆರಗು ಮೂಡಿಸುವಂತಹ ಆಭರಣಗಳು ಇವೆ. ಕಪ್ಪು ಬಿಳುಪು ಬಣ್ಣದ ಅನನ್ಯ ವಿನ್ಯಾಸ ಹೊಂದಿವೆ. ಅತ್ಯಂತ ಹಗುರವಾದ ಆಭರಣಗಳು ಇವಾಗಿದ್ದು, ಮಹಿಳೆಯರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ₹ 1999ರಿಂದ ಆಭರಣಗಳು ಸಿಗಲಿವೆ. ಕಿವಿಯೋಲೆಗಳ ಅತ್ಯುತ್ತಮ ಸಂಗ್ರಹ ಇದೆ. ಹರಳುಗಳ ಆಯ್ಕೆ ಕೂಡ ವಿಭಿನ್ನವಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.