ADVERTISEMENT

ದ್ವಿಭಾಷೆಯಲ್ಲಿ ಕಾರ್ಗಲ್‌ ನೈಟ್ಸ್ ವೆಬ್‌ ಸರಣಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 6:39 IST
Last Updated 11 ಆಗಸ್ಟ್ 2020, 6:39 IST
ಕಾರ್ಗಲ್‌ ನೈಟ್ಸ್‌
ಕಾರ್ಗಲ್‌ ನೈಟ್ಸ್‌   

1995ರ ಅವಧಿಯಲ್ಲಿ ಮಲೆನಾಡು ಸುತ್ತಮುತ್ತ ನಡೆದ ನೈಜ ಘಟನೆಗಳ ಎಳೆಯಾಗಿಟ್ಟುಕೊಂಡುನಿರ್ದೇಶಕ ದೇವರಾಜ್ ಪೂಜಾರಿ ‘ಕಾರ್ಗಲ್ ನೈಟ್ಸ್’ ವೆಬ್‌ ಸರಣಿ ನಿರ್ದೇಶಿಸಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಿರುವ ಈ ವೆಬ್‌ಸರಣಿ ಸದ್ಯದಲ್ಲೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಲಾಕ್‍ಡೌನ್‍ಗೂ ಮೊದಲೇ ಶೂಟಿಂಗ್ ಮುಗಿಸಿದ್ದ ಈ ವೆಬ್ ಸರಣಿಯ ಚಿತ್ರೀಕರಣೋತ್ತರ ಕೆಲಸಗಳು ಇತ್ತೀಚೆಗಷ್ಟೇ ಪೂರ್ಣಗೊಂಡಿವೆ.

ಯಶಸ್ ಪ್ರೊಡಕ್ಷನ್ ಬ್ಯಾನರ್‌ನಡಿ ಎನ್.ಮಂಜುನಾಥ್ ಮತ್ತು ಜೆ.ಎನ್.ಪ್ರದೀಪ್ ಜಂಟಿಯಾಗಿ ‘ಕಾರ್ಗಲ್ ನೈಟ್ಸ್’ ನಿರ್ಮಿಸಿದ್ದಾರೆ. ಈ ಹಿಂದೆ ‘ಕಿನಾರೆ’ ಸಿನಿಮಾ ಮಾಡಿದ ಅನುಭವವಿರುವ ದೇವರಾಜ್, ಈ ವೆಬ್‌ ಸರಣಿಯನ್ನು ಸಿನಿಮಾ ಶೈಲಿಯಲ್ಲೇ ನಿರ್ಮಿಸಿದ್ದಾರೆ.ರೆಟ್ರೋ ಕ್ರೈಂ-ಥ್ರಿಲ್ಲರ್ ಕಥಾಹಂದರವಿರುವ ಈ ವೆಬ್ ಸರಣಿಗೆಸಿಂಕ್ ಸೌಂಡ್‍ ಸ್ಪರ್ಶ ಕೊಡಲಾಗಿದೆ.

ADVERTISEMENT

ಹರ್ಷಿಲ್ ಕೌಶಿಕ್, ಅಕ್ಷತಾ ಅಶೋಕ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ಸಂದೀಪ್ ನಾಗರಾಜ್, ನಾಗರಾಜ್ ಬೈಂದೂರ್, ಅರ್ಚನಾ ಮೊಸಳೆ, ಸುಚನ್ ಶೆಟ್ಟಿ ಹಾಗೂ ಚಂದ್ರಕಾಂತ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವಮೊಗ್ಗ, ಸಾಗರ, ಜೋಗ್‍ಫಾಲ್ಸ್ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಛಾಯಾಗ್ರಹಣ ಮತ್ತು ಸಂಕಲನ ಎ.ಎನ್‍.ಆರ್. ಅರುಣ್,ಸಂಗೀತ ಸಂಯೋಜನೆ ಬಿ.ಆರ್.ಸುರೇಂದ್ರನಾಥ್ ಅವರದು.

‘ನಿರ್ಮಾಣ ಹಂತದಲ್ಲಿರುವಾಗಲೇಒಟಿಟಿ ಪ್ಲಾಟ್‍ಫಾರ್ಮ್‍ಗಳಿಂದ ಸಾಕಷ್ಟು ಬೇಡಿಕೆ ಬಂದಿತ್ತು.ಎಲ್ಲವೂ ಒಂದುಹಂತಕ್ಕೆ ಬಂದ ನಂತರವಷ್ಟೇ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಮೊದಲಿಗೆ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಿ, ಮುಂಬರುವ ದಿನಗಳಲ್ಲಿ ತಮಿಳು ಹಾಗೂ ತೆಲುಗಿಗೂ ಡಬ್ ಮಾಡುವ ಆಲೋಚನೆ ಇದೆ’ ಎನ್ನುತ್ತಾರೆ ನಿರ್ದೇಶಕದೇವರಾಜ್ ಪೂಜಾರಿ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.