ADVERTISEMENT

ಯಕ್ಷಗಾನೋತ್ಸವ 23ಕ್ಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 19:30 IST
Last Updated 20 ಫೆಬ್ರುವರಿ 2020, 19:30 IST
ಯಕ್ಷಗಾನ
ಯಕ್ಷಗಾನ   

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆಯು ಫೆ.23ರಂದು ಸಂಕಲ್ಪ ಯಕ್ಷಗಾನೋತ್ಸವ ‘ಹಿಮ್ಮೇಳ ಗಾನ ಹಬ್ಬ’ವನ್ನು ಯಲ್ಲಾಪುರದ ನಿಸರ್ಗಮನೆಯಲ್ಲಿ ಹಮ್ಮಿಕೊಂಡಿದೆ.

ಇತ್ತೀಚೆಗೆ ಅಗಲಿದ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರ ಸ್ಮರಣೆಯಲ್ಲಿ ಬೆಳಿಗ್ಗೆ 10ರಿಂದ ದಿನಪೂರ್ತಿ ಕಾರ್ಯಕ್ರಮ ನಡೆಯಲಿದೆ ಎಂದು ಉತ್ಸವದ ರೂವಾರಿ ಪ್ರಮೋದ ಹೆಗಡೆ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ, ಯಕ್ಷಗಾನ ಹಿಮ್ಮೇಳದ ಭಾಗವತಿಕೆ, ಮೃದಂಗ, ಚಂಡೆ ಮೇಳೈಸಲಿದೆ. ಪ್ರಸಿದ್ಧ ಕಲಾವಿದರಾದ ವಿದ್ವಾನ್ ಗಣಪತಿ ಭಟ್ಟ, ಸರ್ವೇಶ್ವರ ಹೆಗಡೆ, ಜನ್ಸಾಲೆ ರಾಘವೇಂದ್ರ ಆಚಾರ್ಯ, ರವೀಂದ್ರ ಭಟ್ಟ ಅಚವೆ, ಅನಂತ ದಂತಳಿಗೆ, ಗೋಪಾಲಕೃಷ್ಣ ಭಟ್ಟ ಜೋಗಿಮನೆ, ಕಾವ್ಯಶ್ರೀ ಅಜೇರು ಭಾಗವತಿಕೆ ಯಲ್ಲಿ, ಗಣಪತಿ ಭಾಗವತ ಕವಾಳೆ, ಸುನೀಲ್ ಭಂಡಾರಿ ಕಡತೋಕಾ, ಎನ್.ಜಿ.ಹೆಗಡೆ, ಕೃಷ್ಣಪ್ರಕಾಶ ಉಳಿತ್ತಾಯ, ಪಿ.ಕೆ.ಹೆಗಡೆ ಹರಿಕೇರಿ ಮೃದಂಗದಲ್ಲಿ, ಕೃಷ್ಣ ಯಾಜಿ, ಗಣೇಶ ಗಾಂವ್ಕರ, ಮಹಾಬಲೇಶ್ವರ ನಾಯ್ಕನಕೆರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ, ಸುಜನ್ ಹಾಲಾಡಿ ಚಂಡೆಯಲ್ಲಿ ಗಮನ ಸೆಳೆಯಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.