ADVERTISEMENT

ಗಿರ್‌ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಸಿಂಹದ ಮರಿ ಸಾವು

ಪಿಟಿಐ
Published 3 ಸೆಪ್ಟೆಂಬರ್ 2020, 9:07 IST
Last Updated 3 ಸೆಪ್ಟೆಂಬರ್ 2020, 9:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ಗುಜರಾತಿನ ಅಮೆಲಿ ಜಿಲ್ಲೆಯ ಗಿರ್‌ ಅರಣ್ಯ ಪ್ರದೇಶದಲ್ಲಿ ರಕ್ಷಿಸಲ್ಪಟ್ಟಿದ್ದ ಮೂರು ತಿಂಗಳ ಸಿಂಹದ ಮರಿಯು ಗುರುವಾರ ಸಂಜೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಯಿಯಿಂದ ಬೇರ್ಪಟ್ಟಿದ್ದ ಈ ಗಂಡು ಮರಿಯನ್ನು ಬುಧವಾರ ಸಂಜೆ ವಾಂದಾ ಗ್ರಾಮದ ಶತ್ರುಂಜೀ ಅರಣ್ಯ ವಿಭಾಗದ ಸಿಬ್ಬಂದಿ ರಕ್ಷಿಸಿದ್ದರು. ಆಗಲೇ ಅಶಕ್ತವಾಗಿದ್ದ ಈ ಮರಿಯನ್ನು ರಕ್ಷಣಾ ಕೇಂದ್ರದಲ್ಲಿ ವೈದ್ಯರ ನಿಗಾದಲ್ಲಿ ಇಡಲಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಅದು ಮೃತಪಟ್ಟಿದೆ ಎಂದು ಅವರು ಮಾಹಿತಿ ನೀಡಿದರು.

ಗುಜರಾತಿನ ಗಿರ್ ಅರಣ್ಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 600ಕ್ಕೂ ಹೆಚ್ಚು ಸಿಂಹಗಳಿವೆ ಎಂದು ಅಂದಾಜಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.