ADVERTISEMENT

ಜೀವ ಜಗತ್ತು: ಇದು ಕ್ಯಾಪಿಬರಾ!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 19:30 IST
Last Updated 11 ಸೆಪ್ಟೆಂಬರ್ 2021, 19:30 IST
ಕ್ಯಾಪಿಬರಾ
ಕ್ಯಾಪಿಬರಾ   

ನೋಡೋದಕ್ಕೆ ಕಾಲುಗಳನ್ನು ಹೊಂದಿದ ದೊಡ್ಡ ಬ್ಯಾರೆಲ್‌ನಂತೆ ಗೋಚರಿಸುತ್ತದೆ. ಅಥವಾ ಕಂದುಬಣ್ಣದ ಕೂದಲನ್ನು ಮೈಮೇಲೆ ಹೊಂದಿದ ದೊಡ್ಡ ಹಂದಿಯೊಂದು ನಡೆದು ಹೋಗುತ್ತಿರುವಂತೆ ಭಾಸವಾಗುತ್ತದೆ. ಇದು ಬಾಲವಿಲ್ಲದ ನೀರುನಾಯಿಯಂತೆ ಕಂಡರೂ ಅಚ್ಚರಿ ಇಲ್ಲ. ಆದರೆ, ಇದೊಂದು ಕ್ಯಾಪಿಬರಾ ಎಂಬ ದಂಶಕ. ದಂಶಕ ಪ್ರಭೇದದಲ್ಲಿ ಜಗತ್ತಿನಲ್ಲಿಯೇ ಕ್ಯಾಪಿಬರಾ ಅತ್ಯಂತ ದೊಡ್ಡದು. ಎರಡು ಅಡಿಗಳಷ್ಟು ಇದು ಎತ್ತರವಾಗಿರುತ್ತದೆ. ಇಲಿ ಕುಟುಂಬಕ್ಕೆ ಸೇರಿದ ಪ್ರಾಣಿ ಇದಾದರೂ ಗಿನಿ ಹಂದಿ ಪ್ರಭೇದಕ್ಕೆ ಹತ್ತಿರವಾಗಿದೆ.

ಅಮೆರಿಕ ಹಾಗೂ ಆಫ್ರಿಕಾದಲ್ಲಿ ಕಂಡು ಬರುವ ಕ್ಯಾಪಿಬರಾಗಳನ್ನು ನೀರು ಹಂದಿಗಳೆಂದೂ ಕರೆಯಲಾಗುತ್ತದೆ. ನುರಿತ ಈಜುಪಟುಗಳಾದ ಇವುಗಳು ಕೆಸರಿನಲ್ಲೂ ಬಿದ್ದು ಹೊರಳಾಡುತ್ತವೆ. ಇಲಿ ಕುಟುಂಬಕ್ಕೆ ಸೇರಿದ ಪ್ರಾಣಿಗಳು ಇವಾಗಿದ್ದರಿಂದ ಉದ್ದನೆಯ ಹಾಗೂ ಚೂಪಾದ ಹಲ್ಲುಗಳನ್ನು ಹೊಂದಿರುತ್ತವೆ. ಆ ಹಲ್ಲುಗಳು ನಿರಂತರವಾಗಿ ಬೆಳೆಯುವುದರಿಂದ ಅವುಗಳನ್ನು ಸವೆಸಲು ಏನಾದರೂ ಬಾಯಿ ಆಡಿಸುತ್ತಿರುತ್ತವೆ. ಒಂದೊಂದು ಕ್ಯಾಪಿಬರಾಕ್ಕೆ ನಿತ್ಯ ಸರಾಸರಿ 3 ಕೆ.ಜಿಯಷ್ಟು ಹುಲ್ಲುಬೇಕು. ಅವುಗಳು ಬೊಗಳುತ್ತವೆ, ಸೀಟಿ ಹೊಡೆಯುತ್ತವೆ, ಕಿಚಿಪಿಚಿ ಸದ್ದು ಹೊರಡಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT