ADVERTISEMENT

Fact Check: ಪ್ರಧಾನಿ ಮೋದಿ ಅಭಿಮಾನಿ ಮನೆಗೆ ಭೇಟಿ ನೀಡಿದ್ದರೇ ಕೇಜ್ರಿವಾಲ್?

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 19:30 IST
Last Updated 16 ಸೆಪ್ಟೆಂಬರ್ 2022, 19:30 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ಅರವಿಂದ ಕೇಜ್ರಿವಾಲ್‌ ಅವರು ನಾಗರಿಕರ ಮನೆಯಲ್ಲಿ ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೆಯ ಗೋಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಹಾಕಲಾಗಿದೆ. ‘ಕೇಜ್ರಿವಾಲ್‌ ಯಾರ ಮನೆಗೆ ಹೋಗಿದ್ದಾರೋ ಅವರು ಮೋದಿಜೀ ಅವರ ಅಭಿಮಾನಿಯಾಗಿದ್ದಾರೆ. ಕೇಜ್ರಿವಾಲ್‌ ಮುಟ್ಟಾಳರಾದರು’ ಎಂದು ಬಿಜೆಪಿಯ ಜೈಪಾಲ್‌ ಸಿಂಗ್ ಟ್ವೀಟ್ ಮಾಡಿದ್ದಾರೆ. ಇದೇ ಅರ್ಥ ಬರುವ ಹಲವು ಪೋಸ್ಟ್‌ಗಳು ಸಾವಿರಾರು ಬಾರಿ ಹಂಚಿಕೆಯಾಗಿವೆ.

‘ಇದು ಸುಳ್ಳು ಸುದ್ದಿ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಗುಜರಾತ್ ಪ್ರವಾಸದ ವೇಳೆ ಅರವಿಂದ ಕೇಜ್ರಿವಾಲ್ ಅವರು ಆಟೊ ಚಾಲಕರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದರು. ಆ ಮನೆಯ ಚಿತ್ರವನ್ನು ಎಎಪಿ ಪ್ರಕಟಿಸಿತ್ತು. ಮೂಲ ಚಿತ್ರದಲ್ಲಿ, ಮನೆಯ ಗೋಡೆಯ ಮೇಲೆ ಮೋದಿ ಅವರ ಫೋಟೊ ಇಲ್ಲ. ಆದರೆ, ಮೂಲ ಚಿತ್ರವನ್ನು ತಿರುಚಿ ಅದರಲ್ಲಿ ಮೋದಿ ಅವರ ಫೋಟೊವನ್ನು ಸೇರಿಸಲಾಗಿದೆ. ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್‌ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT