ADVERTISEMENT

Fact check: ಸೋನಿಯಾ ಗಾಂಧಿ ಕಪಾಟಿನಲ್ಲಿದ್ದ ಪುಸ್ತಕಗಳ ಬಗ್ಗೆ ಸುಳ್ಳು ಪ್ರಚಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 16:02 IST
Last Updated 1 ಜೂನ್ 2021, 16:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸೋನಿಯಾಗಾಂಧಿಅವರಪುಸ್ತಕದಕಪಾಟಿನಲ್ಲಿHow to convert India into Christian nation, Holy bible ಮತ್ತು @noconversion ಎಂಬ ಪುಸ್ತಕಗಳು ಇವೆ. ಚಿತ್ರವನ್ನು ದೊಡ್ಡದು ಮಾಡಿ ನೋಡಿ, ಇವರ ಉದ್ದೇಶ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಬೇರೆ ಸಾಕ್ಷ್ಯ ಬೇಕೆ?' ಎಂಬ ಹೇಳಿಕೆ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

2020ರ ಮೇ 27ರಂದು ಬಿಹಾರ ಚುನಾವಣೆಯನ್ನು ಉದ್ದೇಶಿಸಿಸೋನಿಯಾಗಾಂಧಿಅವರು ಮಾತನಾಡಿದ್ದ ವಿಡಿಯೊವನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿತ್ತು. ಆ ವಿಡಿಯೊವಿನ ಸ್ಕ್ರೀನ್‌ಶಾಟ್‌ ಅನ್ನು ಪಿಟಿಐ ಪ್ರಕಟಿಸಿತ್ತು. ಡೆಕ್ಕನ್ ಹೆರಾಲ್ಡ್, ದಿ ಹಿಂದೂ, ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗಳು ಈ ಚಿತ್ರವನ್ನು ಪ್ರಕಟಿಸಿದ್ದವು. ವೈರಲ್ ಆಗಿರುವ ಚಿತ್ರದಲ್ಲಿ ಗುರುತು ಮಾಡಿರುವ ಪುಸ್ತಕಗಳು ಮೂಲ ಚಿತ್ರದಲ್ಲಿ ಇಲ್ಲ. ಆ ಪುಸ್ತಕಗಳನ್ನು ಎಡಿಟ್ ಮಾಡಿ ಚಿತ್ರದಲ್ಲಿ ಸೇರಿಸಲಾಗಿದೆ. ತಿರುಚಲಾದ ಚಿತ್ರವನ್ನು ಬಳಸಿಕೊಂಡು,ಸೋನಿಯಾಗಾಂಧಿಅವರಬಗ್ಗೆ ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT