ADVERTISEMENT

Fact Check: ಮಸೀದಿಗಾಗಿ ನಾಗ ದೇವಸ್ಥಾನ ಕೆಡವಿದರೇ ಮುಸ್ಲಿಮರು?

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 23:00 IST
Last Updated 18 ಅಕ್ಟೋಬರ್ 2022, 23:00 IST
   

‘ಆಂಧ್ರಪ್ರದೇಶದ ಗುಂಟೂರಿನಲ್ಲಿ ಜಿಹಾದಿಗಳು ಪುರಾತನ ಹಿಂದೂ ದೇಗುಲ ಧ್ವಂಸ ಮಾಡಿದ್ದಾರೆ. ಹಿಂದೂಗಳೇ ಎಚ್ಚೆತ್ತುಕೊಳ್ಳಿ’ ಎಂಬ ಬರಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಹರಿದಾಡುತ್ತಿದೆ. ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿರುವ ಈ ವಿಡಿಯೊವನ್ನು ಹಲವರು ಹಂಚಿಕೊಂಡಿದ್ದಾರೆ. ನಾಗ ದೇವಸ್ಥಾನವನ್ನು ಕೆಡವಲಾಗಿದೆ ಎಂದು ಕೆಲವರು ಉಲ್ಲೇಖಿಸಿದ್ದಾರೆ. ಆದರೆ ಇದು ಸುಳ್ಳು ಸುದ್ದಿ.

‘ರೆಹಮಾನ್ ಎಂಬುವರು 40 ವರ್ಷಗಳ ಹಿಂದೆ ನಿರ್ಮಿಸಿದ್ದ ಬಾಜಿ ಬಾಬಾದರ್ಗಾವನ್ನು ಕೆಡವಿ, ಆ ಸ್ಥಳದಲ್ಲಿ ಮಸೀದಿ ನಿರ್ಮಿಸುವ ಉದ್ದೇಶದಿಂದ ಕಾಂಪೌಂಡ್ ತೆರವು ಮಾಡಲಾಗುತ್ತಿದೆ. ಆದರೆ, ದೇವಸ್ಥಾನ ಧ್ವಂಸ ಮಾಡಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ’ ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ. ಮಸೀದಿ ನಿರ್ಮಿಸುವ ಬದಲು ದರ್ಗಾವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಸ್ಥಳೀಯರು ತಕರಾರು ತೆಗೆದಿದ್ದರಿಂದ ಕಟ್ಟಡ ತೆರವು ಕೆಲಸವನ್ನು ತಾತ್ಕಾಲಿಕವಾಗಿಸ್ಥಗಿತಗೊಳಿಸಲಾಗಿದೆ ಎಂದು ಲಾಲತ್‌ಪೇಟೆ ಠಾಣೆಯ ಪೊಲೀಸ್ ಆಧಿಕಾರಿ ತಿಳಿಸಿದ್ದಾರೆ. ಈ ದರ್ಗಾದ ಕಮಾನಿನಲ್ಲಿ ನಾಗ, ಅರ್ಧಚಂದ್ರ ಹಾಗೂ ನಕ್ಷತ್ರದ ವಿನ್ಯಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT