ನವದೆಹಲಿ: ‘ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಣಿಜ್ಯ ಟ್ರಕ್ಗಳ ಚಾಲಕರಿಗೂ ಪೈಲಟ್ಗಳ ಮಾದರಿಯಲ್ಲಿ ಚಾಲನಾ ಸಮಯವನ್ನು ನಿಗದಿಗೊಳಿಸಬೇಕು ಹಾಗೂ ಟ್ರಕ್ಗಳಲ್ಲಿ ನಿದ್ದೆ ಪತ್ತೆ ಹಚ್ಚುವ ಸಂವೇದಕಗಳನ್ನು ಅಳವಡಿಸಬೇಕು’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಚಾಲಕರು ಆಯಾಸರಹಿತವಾಗಿ ವಾಹನ ಚಲಾಯಿಸಲು ಅನುಕೂಲವಾಗುವಂತೆ ವಿಮಾನದ ಪೈಲಟ್ಗಳಂತೆಯೇ ಅವರಿಗೂ ನಿರ್ದಿಷ್ಟ ಚಾಲನಾ ಸಮಯವನ್ನು ನಿಗದಿಗೊಳಿಸಬೇಕು. ಇದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಯುರೋಪಿಯನ್ ಮಾನದಂಡಗಳಿಗೆ ಸಮನಾದ ವಾಣಿಜ್ಯಸೇವೆಗಳಿಗೆ ಬಳಸುವ ವಾಹನಗಳಲ್ಲಿ ಆನ್ಬೋರ್ಡ್ ಸ್ಲೀಪ್ ಡಿಟೆಕ್ಷನ್ ಸೆನ್ಸರ್ಗಳನ್ನು ಅಳವಡಿಸುವ ಕುರಿತು ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದ್ದಾರೆ.
‘ಜಿಲ್ಲಾ ರಸ್ತೆ ಸಮಿತಿ ಸಭೆಗಳು ನಿಯಮಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿಯೂ’ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.