ADVERTISEMENT

ಕೋವಿಡ್‌ನಿಂದ ಅನಾಥರಾದ ಮಕ್ಕಳ ಮಾಸಿಕ ಸ್ಟೈಪೆಂಡ್‌ ಏರಿಕೆ: ಕೇಂದ್ರ ಚಿಂತನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 16:19 IST
Last Updated 14 ಸೆಪ್ಟೆಂಬರ್ 2021, 16:19 IST
   

ನವದೆಹಲಿ: ಕೋವಿಡ್–19ನಿಂದ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ನೀಡಲಾಗುವ ಮಾಸಿಕ ಸ್ಟೈಪೆಂಡ್‌ ಮೊತ್ತವನ್ನು ಹಾಲಿ ₹ 2000 ದಿಂದ ₹ 4,000ಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈ ಕುರಿತುಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ಪ್ರಸ್ತಾವ ಮುಂದಿನ ವಾರ ಸಂಪುಟ ಸಭೆಯ ಅನುಮೋದನೆಗೆ ಬರುವ ಸಂಭವವಿದೆ ಎಂದು ತಿಳಿಸಿದರು.

ತಂದೆ–ತಾಯಿ ಅಥವಾ ಕಾನೂನುಬದ್ಧ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ, ‘ಮಕ್ಕಳಿಗಾಗಿ ಪಿ.ಎಂ–ಕೇರ್ಸ್‌’ ಯೋಜನೆಯಡಿ ನೆರವು ನೀಡುವುದನ್ನು ಸರ್ಕಾರ ಪ್ರಕಟಿಸುವ ಸಂಭವವಿದೆ.

ADVERTISEMENT

ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಇದುವರೆಗೂ ಯೋಜನೆಯಡಿ ನೆರವು ಕೋರಿ 3,250 ಅರ್ಜಿಗಳು ಬಂದಿವೆ. ಆಯಾ ಜಿಲ್ಲಾಧಿಕಾರಿಗಳು 667 ಅರ್ಜಿಗಳಿಗೆ ಅನುಮೋದನೆ ನೀಡಿದ್ದಾರೆ. ಒಟ್ಟು 467 ಜಿಲ್ಲೆಗಳಿಂದ ಮಾಹಿತಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.