ADVERTISEMENT

ಇದೆಂಥ (ಮೂಢ)ನಂಬಿಕೆ?

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2017, 19:30 IST
Last Updated 10 ಆಗಸ್ಟ್ 2017, 19:30 IST

‘ಹೂತಿದ್ದ ಶವ ತಗೆದು ಸುಡುವ ಯತ್ನಕ್ಕೆ ತಡೆ: ರುಂಡ ನಾಪತ್ತೆ!’ ವರದಿ ಓದಿ ತುಂಬಾ ಬೇಸರವಾಯಿತು (ಪ್ರ.ವಾ., ಆಗಸ್ಟ್‌ 10).

ಬಿಳಿ ಮಚ್ಚೆ (ತೊನ್ನು) ಆಗಿದ್ದ ವ್ಯಕ್ತಿಯ ಶವವನ್ನು ಹೂತಿರುವುದರಿಂದ ಊರಲ್ಲಿ ಮಳೆಯಾಗುತ್ತಿಲ್ಲ ಎಂದು ಶವವನ್ನು ಹೊರತೆಗೆದು ಸುಡಲು ಮುಂದಾಗಿರುವ ಅಗ್ರಹಾರ ಗ್ರಾಮಸ್ಥರ ಮನಸ್ಥಿತಿಯನ್ನು ನೋಡಿದರೆ, ಇನ್ನೂ ನಮ್ಮ ಜನ ಅದೆಷ್ಟು ಮೂಢನಂಬಿಕೆಗಳನ್ನು ಪೋಷಿಸುತ್ತಿದ್ದಾರೆ ಎನ್ನಿಸಿತು.

ಈಗಿನ ವೈಜ್ಞಾನಿಕ ಯುಗದಲ್ಲೂ ಜನ ಇಂಥ ವಿಚಾರಗಳಲ್ಲಿ ವಿಶ್ವಾಸವಿಟ್ಟು ಆಚರಿಸುತ್ತಿರುವುದು ದುರಂತವೇ ಸರಿ.
–ಶಿವಾನಂದ ಜಿ. ಹಿರೇಮಠ, ಬಸವಕಲ್ಯಾಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.