ADVERTISEMENT

ಇಂಧನ ಬೆಲೆ ಅರಿಯಲು APP ಬಳಸಿ

ರಶ್ಮಿ ಕಾಸರಗೋಡು
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST

ಕೆಲವು ದಿನಗಳಿಂದ ಇಂಧನ ಬೆಲೆಯಲ್ಲಿ ಏರಿಳಿಕೆ ಆಗುತ್ತಲೇ ಇದೆ. ಪ್ರತಿಯೊಂದು ನಗರದಲ್ಲಿಯೂ ಇಂಧನ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ಹೀಗಿರುವಾಗ ನಿಮ್ಮ ನಗರದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏನು ಎಂಬುದನ್ನು ತಿಳಿಯಲು ಆ್ಯಪ್ ಸಹಾಯ ಪಡೆಯಬಹುದು.

MapMyFuel: ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಬಗ್ಗೆ ಮಾಹಿತಿ ನೀಡುವುದರ ಜತೆಗೆ ನಿಮಗೆ ಹತ್ತಿರದಲ್ಲಿ ಪೆಟ್ರೋಲ್ ಪಂಪ್ ಎಲ್ಲಿದೆ ಮತ್ತು ಅವುಗಳ ರೇಟಿಂಗ್ ತೋರಿಸುತ್ತದೆ ಈ ಆ್ಯಪ್. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಹಿಂದೂಸ್ತಾನ್ ಪೆಟ್ರೊಲಿಯಂ ಲಿಮಿಟೆಡ್, ಭಾರತ್ ಪೆಟ್ರೊಲಿಯಂ ಲಿಮಿಟೆಡ್ ಮೊದಲಾದ ಕಂಪನಿಗಳ ಇಂಧನ ಬೆಲೆಯನ್ನೂ ತೋರಿಸುತ್ತದೆ. ಇಷ್ಟೇ ಅಲ್ಲದೆ ವಾಹನದ
ಮೈಲೇಜ್ ಅನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯೂ ಇದರಲ್ಲಿದೆ.

Daily Fuel Price: ಇಂಧನ ಬೆಲೆಯನ್ನು ಡಿಸ್ ಪ್ಲೇ ಮಾಡುವುದ ಜತೆಗೆ ಹತ್ತಿರದಲ್ಲಿರುವ ಪೆಟ್ರೋಲ್ ಸ್ಟೇಷನ್ ಅನ್ನು ಈ ಆ್ಯಪ್ ಮೂಲಕ ಪತ್ತೆ ಮಾಡಬಹುದು. ಇಂಡಿಯನ್ ಆಯಿಲ್, ಭಾರತ್ ಪೆಟ್ರೊಲಿಯಂ ಮೊದಲಾದ ಕಂಪನಿಗಳಲ್ಲಿ ಒಂದು ವಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನೂ ಇದು ತೋರಿಸುತದೆ. ಬಳಕೆದಾರರು ನಗರವನ್ನು ಆಯ್ಕೆ ಮಾಡಿ ಅಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇಲ್ಲಿಯೂ ಮೈಲೇಜ್ ಮೀಟರ್ ಇದೆ.

ADVERTISEMENT

Daily Petrol/Diesel Price: ಪ್ರಸ್ತುತ ದಿನದ ಇಂಧನ ಬೆಲೆ ಮತ್ತು ಹಿಂದಿನ ದಿನದ ಬೆಲೆಯನ್ನು ಈ ಆ್ಯಪ್ ತೋರಿಸುತ್ತದೆ. ಯಾವ ನಗರದಲ್ಲಿ ಇಂಧನ ಬೆಲೆ ಎಷ್ಟಿದೆ ಎಂಬುದನ್ನು ಈ ಆ್ಯಪ್ ತೋರಿಸುತ್ತಿದ್ದು, ಪ್ರತಿದಿನ ಅಪ್ ಡೇಟ್ ಆಗಿರುತ್ತದೆ. ಬಳಕೆದಾರರು 6 ನಗರಗಳನ್ನು ಫೇವರಿಟ್ ಮಾಡಿಟ್ಟರೆ, ಆ ನಗರಗಳಲ್ಲಿನ ಇಂಧನ ಬೆಲೆಯನ್ನು ಈ ಆ್ಯಪ್ ತೋರಿಸುತ್ತದೆ. ಅಷ್ಟೇ ಅಲ್ಲದೆ ಭಾರತದ ಪ್ರಮುಖ ನಗರಗಳಲ್ಲಿನ ಇಂಧನ ಬೆಲೆ ಇಲ್ಲಿರುತ್ತದೆ. ಪ್ರತಿಯೊಂದು ನಗರದಲ್ಲಿ ಕಳೆದ ಒಂದು ವಾರದಲ್ಲಿ ಇಂಧನ ಬೆಲೆ ಎಷ್ಟಿತ್ತು ಎಂಬುದನ್ನು ಆ್ಯಪ್ ತೋರಿಸುತ್ತದೆ.

Daily Petrol Diesel Price in India GST Rate Finder :ದೇಶದಾದ್ಯಂತ ವಿರುವ 500 ನಗರಗಳಲ್ಲಿ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೊಲಿಯಂ, ಭಾರತ್ ಪೆಟ್ರೊಲಿಯಂ ಮೊದಲಾದ ಕಂಪನಿಗಳ ಇಂಧನ ಬೆಲೆ ಜತೆ ಜಿಎಸ್‍ಟಿ ದರವನ್ನೂ ತೋರಿಸುತ್ತದೆ. ಇಲ್ಲಿ ಕ್ಯಾಲ್ಕಲೇಟ್ ರೇಟ್ಸ್ ಎಂಬ ಫೀಚರ್ ಬಳಸಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು ಲೀಟರ್‌ಗೆ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕ ಹಾಕಬಹುದು.

Fuel @IOC-IndianOil: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಡೆವಲಪ್ ಮಾಡಿದ ಈ ಆ್ಯಪ್‌ನಲ್ಲಿ ಪಂಪ್ ಲೋಕೇಟರ್, ಇ- ಬಿಲ್ ಲಾಯಲ್ಟಿ ರಿವಾರ್ಡ್ ಪಾಯಿಂಟ್ಸ್ ಮೊದಲಾದ ಫೀಚರ್‌ಗಳಿವೆ. ಈ ಆ್ಯಪ್ ಮ್ಯಾಪ್ ಮೂಲಕ ಇಂಡಿಯನ್ ಆಯಿಲ್ ಪೆಟ್ರೋಲ್ ಸ್ಟೇಷನ್‌ಗಳ ಬಗ್ಗೆ ಮಾಹಿತಿ ನೀಡುತ್ತದೆ.

ಇ–ಬಿಲ್ ಮೂಲಕ ಇಂಧನ ಖರೀದಿಯನ್ನು ಟ್ರ್ಯಾಕ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.