ADVERTISEMENT

ವಾಚಕರ ವಾಣಿ: ನ್ಯಾಯಾಂಗ ವ್ಯವಸ್ಥೆಗೆ ಅಮೋಘ ಕೊಡುಗೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 19:46 IST
Last Updated 27 ಆಗಸ್ಟ್ 2021, 19:46 IST

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿವಂಗತ ಇ.ಎಸ್.ವೆಂಕಟರಾಮಯ್ಯ ಅವರ ಪುತ್ರಿ ನಾಗರತ್ನ ಅವರು ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿರುವುದರಿಂದ, ಶ್ರೀಯುತರ ತವರಾದ ಪಾಂಡವಪುರ ತಾಲ್ಲೂಕಿಗೆ ಹೆಮ್ಮೆಯ ಗರಿ ಮೂಡಿದಂತಾಗಿದೆ. ಅಷ್ಟೇ ಅಲ್ಲದೆ, ನ್ಯಾ.ವೆಂಕಟರಾಮಯ್ಯ ಅವರ ಸಹೋದರನ ಪುತ್ರ ಇಂದ್ರೇಶ್ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿರುವುದು ಮತ್ತೊಂದು ವಿಶೇಷ.

ಇದಲ್ಲದೆ ತಾಲ್ಲೂಕಿನ ದಿವಂಗತ ದೊಡ್ಡಕಾಳೇಗೌಡರು ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ತಮಿಳುನಾಡು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನ್ಯಾಯಮೂರ್ತಿ ಸಿ.ಶಿವಪ್ಪ ಅವರು ಪಾಂಡವಪುರದಲ್ಲೇ ವಾಸಿಸುತ್ತಿರುವುದು, ಸಣ್ಣ ತಾಲ್ಲೂಕೊಂದು ದೇಶದ ನ್ಯಾಯಾಂಗ ವ್ಯವಸ್ಥೆಗೆ ನೀಡಿದ ಅಮೋಘ ಕೊಡುಗೆಯೆನಿಸಿದೆ. ಈ ಸಂಗತಿ ನಮ್ಮ ಗ್ರಾಮೀಣ ಪರಿಸರದ ಯುವಕರಿಗೆ ಮಾದರಿ ಹಾಗೂ ಮಾರ್ಗದರ್ಶನವಾಗಲಿ.

ಜೆ.ಬಿ.ಮಂಜುನಾಥ,ಪಾಂಡವಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.