ADVERTISEMENT

ಬರೋಡಾ ತಂಡಕ್ಕೆ ಡೇವ್‌ ವಾಟ್ಮೋರ್ ಕೋಚ್‌

ಪಿಟಿಐ
Published 24 ಸೆಪ್ಟೆಂಬರ್ 2021, 12:59 IST
Last Updated 24 ಸೆಪ್ಟೆಂಬರ್ 2021, 12:59 IST
ಡೇವ್‌ ವಾಟ್ಮೋರ್‌– ಟ್ವಿಟರ್‌ ಚಿತ್ರ
ಡೇವ್‌ ವಾಟ್ಮೋರ್‌– ಟ್ವಿಟರ್‌ ಚಿತ್ರ   

ವಡೋದರಾ (ಪಿಟಿಐ): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವ್ ವಾಟ್ಮೋರ್ ಅವರು ಬರೋಡಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಬರೋಡಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅಜಿತ್ ಲೆಲೆ ಅವರು ಶುಕ್ರವಾರ ಈ ವಿಷಯ ಖಚಿತಪಡಿಸಿದ್ದಾರೆ.

‘ವಾಟ್ಮೋರ್ ಅವರು ಮುಖ್ಯ ಕೋಚ್‌ ಆಗಿ ಮೊನ್ನೆಯೇ ತಂಡವನ್ನು ಸೇರಿಕೊಂಡಿದ್ದಾರೆ. ಇತರ ವಯೋಮಾನದ ತಂಡಗಳ ಕೋಚ್‌ಗಳಿಗೂ ಅವರು ಮಾರ್ಗದರ್ಶನ ಮಾಡಲಿದ್ದಾರೆ‘ ಎಂದು ಲೆಲೆ ತಿಳಿಸಿದ್ದಾರೆ.

ADVERTISEMENT

67 ವರ್ಷದ ವಾಟ್ಮೋರ್‌ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. 1996ರಲ್ಲಿ ಅವರ ತರಬೇತಿಯಲ್ಲಿ ಪಳಗಿದ್ದ ಶ್ರೀಲಂಕಾ ತಂಡವು ವಿಶ್ವಕಪ್ ಜಯಿಸಿತ್ತು. ಈ ಹಿಂದೆ ಅವರು ಕೇರಳ ತಂಡಕ್ಕೂ ತರಬೇತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.