ADVERTISEMENT

ಯೂರೊ ಕಪ್ ಫುಟ್‌ಬಾಲ್ ಸೆಮಿಫೈನಲ್‌: ಇಂಗ್ಲೆಂಡ್‌ಗೆ ಡೆನ್ಮಾರ್ಕ್ ಸವಾಲು

ಆತಿಥೇಯ ತಂಡಕ್ಕೆ ತವರಿನ ಪ್ರೇಕ್ಷಕರ ಬೆಂಬಲ

ಏಜೆನ್ಸೀಸ್
Published 6 ಜುಲೈ 2021, 14:11 IST
Last Updated 6 ಜುಲೈ 2021, 14:11 IST
ಇಂಗ್ಲೆಂಡ್ ತಂಡದ ಆಟಗಾರರ ತಾಲೀಮು– ಎಎಫ್‌ಪಿ ಚಿತ್ರ
ಇಂಗ್ಲೆಂಡ್ ತಂಡದ ಆಟಗಾರರ ತಾಲೀಮು– ಎಎಫ್‌ಪಿ ಚಿತ್ರ   

ಲಂಡನ್‌: 55 ವರ್ಷಗಳ ಬಳಿಕ ಪ್ರಮುಖ ಟೂರ್ನಿಯೊಂದರ ಫೈನಲ್ ತಲುಪುವ ಹಂಬದಲ್ಲಿರುವ ಇಂಗ್ಲೆಂಡ್ ತಂಡವು ಯೂರೊ ಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬುಧವಾರ ರಾತ್ರಿ ಡೆನ್ಮಾರ್ಕ್ ತಂಡವನ್ನು ಎದುರಿಸಲಿದೆ.

ತವರಿನಲ್ಲಿ ನಡೆದ 1966ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್‌ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿಯನ್ನು ಪರಾಭವಗೊಳಿಸಿತ್ತು.

ಈ ಬಾರಿ ತವರಿನ ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆವೆಂಬ್ಲಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿರುವ ತಂಡವು ಎದುರಾಳಿಗೆ ಸೋಲುಣಿಸುವ ಹಂಬಲದಲ್ಲಿದೆ. ಟೂರ್ನಿಯಲ್ಲಿ ನಿಧಾನಗತಿಯ ಆರಂಭ ಮಾಡಿದ್ದ ಹ್ಯಾರಿ ಕೇನ್ ನಾಯಕತ್ವದ ತಂಡವು ಬಳಿಕ ವೇಗದ ಆಟದ ಮೂಲಕ ಗಮನಸೆಳೆದಿದೆ.

ADVERTISEMENT

ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 2-0ಯಿಂದ ಜರ್ಮನಿಯನ್ನು ಮಣಿಸಿದ್ದ ತಂಡವು, ಎಂಟರ ಘಟ್ಟದಲ್ಲಿ ಉಕ್ರೇನ್ಅನ್ನು 4–0ಯಿಂದ ಪರಾಭವಗೊಳಿಸಿತ್ತು.

ಇನ್ನೊಂದೆಡೆ 16ರ ಘಟ್ಟದ ಹಣಾಹಣಿಯಲ್ಲಿ ವೇಲ್ಸ್ ಎದುರು 4–0ಯಿಂದ ಜಯಿಸಿದ್ದ ಡೆನ್ಮಾರ್ಕ್‌, ಬಳಿಕ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 2–1ರಿಂದ ಜೆಕ್ ಗಣರಾಜ್ಯ ತಂಡವನ್ನು ಸೋಲಿಸಿ ನಾಲ್ಕರ ಘಟ್ಟ ತಲುಪಿದೆ.

ಆತಿಥೇಯ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪುವ ಕನಸಿನಲ್ಲಿ ಸೈಮನ್ ಜಾರ್ ಸಾರಥ್ಯದ ಡೆನ್ಮಾರ್ಕ್ ತಂಡವಿದೆ.

ಪಂದ್ಯ ಆರಂಭ: ರಾತ್ರಿ 12.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.