ADVERTISEMENT

ಅಕ್ಟೋಬರ್‌ನಿಂದ ಹಾಕಿ ಟೂರ್ನಿಗಳ ಆರಂಭ

ಪಿಟಿಐ
Published 30 ಆಗಸ್ಟ್ 2021, 12:26 IST
Last Updated 30 ಆಗಸ್ಟ್ 2021, 12:26 IST
ಹಾಕಿ– ಪ್ರಾತಿನಿಧಿಕ ಚಿತ್ರ
ಹಾಕಿ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬಹುನಿರೀಕ್ಷಿತ ದೇಶಿ ಹಾಕಿ ಟೂರ್ನಿಗಳು ಈ ವರ್ಷದ ಅಕ್ಟೋಬರ್‌ನಲ್ಲಿ ಪುನರಾರಂಭಭವಾಗಲಿವೆ. ಕೋವಿಡ್‌ ಬಿಕ್ಕಟ್ಟಿನ ಕಾರಣ ಏಳು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದವು.

ಟೂರ್ನಿ ಅಯೋಜಿಸುವ ರಾಜ್ಯ ಸಂಸ್ಥೆಗಳು ಮತ್ತು ಭಾಗವಹಿಸುವ ತಂಡಗಳಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಗೃಹ ಸಚಿವಾಲಯ ಮತ್ತು ಆಯಾ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ನಿರ್ವಹಿಸುವಂತೆಹಾಕಿ ಇಂಡಿಯಾ ಸೂಚಿಸಿದೆ.

ಅಕ್ಟೋಬರ್‌ 4ರಿಂದ 13ರವರೆಗೆ ಭೋಪಾಲ್‌ನಲ್ಲಿ ನಿಗದಿಯಾಗಿರುವ ಪುರುಷರ ಸಬ್‌ ಜೂನಿಯರ್‌ ಅಕಾಡೆಮಿ ಚಾಂಪಿಯನ್‌ಷಿಪ್‌ನೊಂದಿಗೆ ಟೂರ್ನಿಗಳು ಆರಂಭವಾಗಲಿವೆ. ಬಳಿಕ ಇದೇ ತಾಣದಲ್ಲಿ ಅಕ್ಟೋಬರ್ 18ರಿಂದ 27ರವರೆಗೆ ಜೂನಿಯರ್ ಚಾಂಪಿಯನ್‌ಷಿಪ್‌ ನಡೆಯಲಿದೆ.

ADVERTISEMENT

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳ ಯಶಸ್ಸಿನ ನಂತರ ಹೆಚ್ಚಿನ ಸಂಭ್ರಮ ಮನೆ ಮಾಡಿದೆ. ಈ ಉತ್ಸಾಹವು ಆಟದ ಮೈದಾನಕ್ಕೆ ಪ್ರವಹಿಸುವುದನ್ನು ನಾವು ಖಚಿತಪಡಿಸಿಕೊಳ್ಳಲು ಬಯಸಿದ್ದೇವೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೆಂದ್ರೊ ನಿಂಗೊಂಬಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.