ADVERTISEMENT

ಟೆನಿಸ್‌: ಸೃಷ್ಟಿ, ಕೀರ್ತನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 17:02 IST
Last Updated 13 ಸೆಪ್ಟೆಂಬರ್ 2021, 17:02 IST
ಪ್ರಶಸ್ತಿಗಳೊಂದಿಗೆ ಕೀರ್ತನ್ ವಿಶ್ವಾಸ್‌ ಮತ್ತು ಸೃಷ್ಟಿ ಕಿರಣ್‌
ಪ್ರಶಸ್ತಿಗಳೊಂದಿಗೆ ಕೀರ್ತನ್ ವಿಶ್ವಾಸ್‌ ಮತ್ತು ಸೃಷ್ಟಿ ಕಿರಣ್‌   

ಬೆಂಗಳೂರು: ಕೀರ್ತನ್ ವಿಶ್ವಾಸ್ ಹಾಗೂ ಸೃಷ್ಟಿ ಕಿರಣ್ ಅವರು ಎಫ್‌ಎಸ್‌ಎ ಎಐಟಿಎ 10 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸೋಮವಾರ ಪ್ರಶಸ್ತಿ ಜಯಿಸಿದರು.

ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆದ ಟೂರ್ನಿಯ ಬಾಲಕರ ಫೈನಲ್‌ನಲ್ಲಿ ಕೀರ್ತನ್‌ 4-3 (3), 4-3 (1)ರಿಂದ ಯಶ್‌ ಕುಮಾರ್ ಅವರನ್ನು ಮಣಿಸಿದರು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸೃಷ್ಟಿ 4-0, 4-3 (7-5)ರಿಂದ ಉನ್ನತಿ ಮುರಳೀಧರ್‌ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT