ADVERTISEMENT

ಸಕ್ಕರಿ, ಬಾರ್ಬೊರಾಗೆ ಚೊಚ್ಚಲ ಸೆಮಿಫೈನಲ್‌

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಕೊಕೊ ಗಫ್‌, ಹಾಲಿ ಚಾಂಪಿಯನ್‌ ಇಗಾ ಸ್ವಾಟೆಕ್‌ಗೆ ಸೋಲು

ಏಜೆನ್ಸೀಸ್
Published 9 ಜೂನ್ 2021, 14:36 IST
Last Updated 9 ಜೂನ್ 2021, 14:36 IST
ಗೆಲುವಿನ ಸಂಭ್ರಮದಲ್ಲಿ ಗ್ರೀಸ್‌ನ ಮರಿಯಾ ಸಕ್ಕರಿ –ರಾಯಿಟರ್ಸ್ ಚಿತ್ರ
ಗೆಲುವಿನ ಸಂಭ್ರಮದಲ್ಲಿ ಗ್ರೀಸ್‌ನ ಮರಿಯಾ ಸಕ್ಕರಿ –ರಾಯಿಟರ್ಸ್ ಚಿತ್ರ   

ಪ್ಯಾರಿಸ್‌: ಯುವ ಆಟಗಾರ್ತಿ ಕೊಕೊ ಗಫ್ ಅವರ ದಿಟ್ಟ ಆಟಕ್ಕೆ ತಿರುಗೇಟು ನೀಡಿದ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಸಿಕೋವಾ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು. ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಾಟೆಕ್ ವಿರುದ್ಧ ಗೆದ್ದು ಮರಿಯಾ ಸಕ್ಕರಿ ನಾಲ್ಕರ ಘಟ್ಟ ಪ್ರವೇಶಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ಗ್ರೀಸ್‌ನ ಮರಿಯಾ ಸಕ್ಕರಿ6-4, 6-4ರಲ್ಲಿ ಪೋಲೆಂಡ್‌ನ ಸ್ವಾಟೆಕ್‌ ಅವರನ್ನು ಮಣಿಸಿದರು. ಇದು ಅವರ ಚೊಚ್ಚಲ ಗ್ರ್ಯಾನ್‌ಸ್ಲಾಂ ಸೆಮಿಫೈನಲ್ ಆಗಿದೆ.ಬಾರ್ಬೊರಾ ಕೂಡಗ್ರ್ಯಾನ್‌ಸ್ಲಾಂ ಟೂರ್ನಿಯೊಂದರಲ್ಲಿ ಮೊದಲ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

ಅಮೆರಿಕದ 17ರ ಹರಯದ ಆಟಗಾರ್ತಿ ಎದುರು ಬಾರ್ಬೊರಾ 7-6 (8/6), 6-3ರಲ್ಲಿ ಗೆದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 33ನೇ ಸ್ಥಾನದಲ್ಲಿರುವ ಕ್ರೆಸಿಕೋವಾ ಮೊದಲ ಸೆಟ್‌ನಲ್ಲಿ ಐದು ಸೆಟ್‌ ಪಾಯಿಂಟ್‌ಗಳನ್ನು ಉಳಿಸಿಕೊಂಡು ಗೆಲುವು ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಆರು ಮ್ಯಾಚ್ ಪಾಯಿಂಟ್‌ಗಳನ್ನು ಗಳಿಸಿ ಎದುರಾಳಿಯನ್ನು ಹೊರದಬ್ಬಿದರು.

ADVERTISEMENT

15 ವರ್ಷಗಳಲ್ಲಿ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅತಿ ಕಿರಿಯ ಆಟಗಾರ್ತಿ ಎಂಬ ಖ್ಯಾತಿ ಹೊಂದಿರುವ 24ನೇ ಶ್ರೇಯಾಂಕಿತೆ ಕೊಕೊ ಗಫ್ ಏಳು ಬಾರಿ ಡಬಲ್ ಫಾಲ್ಟ್ ಮತ್ತು 41 ಬಾರಿ ಸ್ವಯಂ ತಪ್ಪೆಸಗಿ ನಿರಾಸೆಗೆ ಒಳಗಾದರು. ಈ ಜಯದೊಂದಿಗೆ ಬಾರ್ಬೊರಾ ಸತತ ಹತ್ತು ಪಂದ್ಯಗಳನ್ನು ಗೆದ್ದಂತಾಗಿದೆ. ಇದೇ ವೇಳೆ ಅವರು ಮಹಿಳೆಯರ ಡಬಲ್ಸ್‌ ವಿಭಾಗದಲ್ಲೂ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.