ಎರೆಹುಳ ಗೊಬ್ಬರವನ್ನು ಮನೆಯಲ್ಲೇ ಅತ್ಯಂತ ಸುಲಭವಾಗಿ ಹೂಕುಂಡಗಳಲ್ಲಿ (ಮಣ್ಣಿನ ಪಾಟ್) ತಯಾರಿಸಬಹುದು.
ಬೇಕಾಗುವ ವಸ್ತುಗಳು: ಕಬ್ಬಿಣದ ಶೆಲ್ಪ್, 15 ಮಣ್ಣಿನ ಪಾಟ್‌ಗಳು, 4 ಪ್ಲಾಸ್ಟಿಕ್ ತಟ್ಟೆ, 4 ಪ್ಲಾಸ್ಟಿಕ್ ಲೋಟಗಳು, ಒಂದು ಅಡಿ ಚೌಕಾಕಾರದ (ಮಧ್ಯದಲ್ಲಿ ತೂತು ಕೊರೆದ) 15 ಕಾರ್ಡ್‌ಬೋರ್ಡ್ ಶೀಟ್‌ಗಳು.
ತಯಾರಿಸುವ ವಿಧಾನ: ಪಾಟ್‌ನಲ್ಲಿ ಮೊದಲು ಸಗಣಿ ಮುಕ್ಕಾಲು ಭಾಗ ತುಂಬಿ. ಅದರ ಮೇಲ್ಭಾಗದಲ್ಲಿ ಕಡ್ಡಿರಹಿತ ತೆಂಗಿನ ಗರಿಯ ಸಣ್ಣ ಸಣ್ಣ ತುಂಡುಗಳು, ಅಡಿಕೆ ಹಾಳೆ ಗರಿಯ ತುಂಡುಗಳು, ಗೊಬ್ಬರ, ಸೊಪ್ಪಿನ ಎಲೆಗಳು (ಗ್ಲಿರಿಸಿಡಿಯ), ಒಣಗಿರುವ ಪುಡಿಹುಲ್ಲು, ಇತರೆ ಒಣಗಿದ ಎಲೆಗಳು ಹೀಗೆ ಯಾವುದನ್ನು ಬೇಕಾದರೂ ಹಾಕಿ.
ಅದರ ಮೇಲೆ ಸುಮಾರು 40 ರಿಂದ 50 ಎರೆಹುಳು ಬಿಡಿ. 6 ದಿನಕ್ಕೊಮ್ಮೆ ಸ್ವಲ್ಪ ಪ್ರಮಾಣದ ನೀರನ್ನು ಚಿಮುಕಿಸಿ. ಇದರಿಂದ ಎರೆಹುಳಗಳಿಗೆ ಬೇಕಾಗುವ ತೇವಾಂಶ ಸಿಗುತ್ತದೆ. ಕಾರ್ಡ್‌ಬೋರ್ಡ್ ಶೀಟ್‌ಗಳ ಮಧ್ಯದಲ್ಲಿ ರಂಧ್ರಗಳನ್ನು ಕೊರೆದು ಪಾಟ್ ಮೇಲ್ಭಾಗದಲ್ಲಿ ಇಡಬೇಕು.
ಇದರಿಂದ ಗಾಳಿಯಾಡಲು ಅವಕಾಶ ಸಿಗುವುದಲ್ಲದೆ ಒಳಭಾಗದಲ್ಲಿ ಎರೆಹುಳಗಳಿಗೆ ಬೇಕಾಗುವ ಹದ ಉಷ್ಣಾಂಶ ಇರುತ್ತದೆ. ಅಲ್ಲದೆ ಹಲ್ಲಿ, ಇಲಿ, ಹಾವು ಇತರೆ ಎರೆಹುಳಗಳನ್ನು ತಿನ್ನುವ ಸಣ್ಣ ಪ್ರಾಣಿಗಳಿಗೆ ಒಳಗೆ ಹೋಗಲು ಅವಕಾಶವಿರುವುದಿಲ್ಲ.
ಶೆಲ್ಪ್‌ನ ಕಾಲುಗಳನ್ನು ಪ್ಲಾಸ್ಟಿಕ್ ಕಪ್‌ಗಳಲ್ಲಿ ಇಡಬೇಕು. ಈ ಕಪ್‌ಗಳನ್ನು ಬೌಲ್‌ಗಳಲ್ಲಿ ಇಟ್ಟು ಕಪ್‌ನ ಹೊರಭಾಗದಲ್ಲಿ ನೀರು ತುಂಬಿಸಬೇಕು. ಇದರಿಂದ ಇರುವೆ ಮತ್ತು ಹುಳಹುಪ್ಪಟಗಳು ಪಾಟ್ ಒಳಗೆ ಹೋಗಿ ಎರೆಹುಳಗಳನ್ನು ತಿನ್ನಲು ಆಗುವುದಿಲ್ಲ.
ಕೇವಲ 5 ಅಡಿ ಜಾಗದಲ್ಲಿ ಶೆಲ್ಪ್ ಇಡಬಹುದು. ಗೊಬ್ಬರ ತಯಾರಿಸಲು ಸುಮಾರು 2,200 ರೂ ಖರ್ಚಾಗುತ್ತದೆ. 15 ರಿಂದ 22 ದಿನಗಳಲ್ಲಿ ಎರೆಹುಳು ಗೊಬ್ಬರ ಸಿಗುತ್ತದೆ. ಮಾಹಿತಿಗೆ: 99803 16033
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.