ADVERTISEMENT

ಕೃಷಿ ಮೇಳ: ವರ್ಷಕ್ಕೆ ಎರಡು ಬಾರಿ ಹಣ್ಣು ನೀಡುವ ಹಲಸು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 20:20 IST
Last Updated 13 ನವೆಂಬರ್ 2021, 20:20 IST
ಭೈರಚಂದ್ರ ಹಲಸು
ಭೈರಚಂದ್ರ ಹಲಸು   

ಬೆಂಗಳೂರು: ವರ್ಷಕ್ಕೆ ಎರಡು ಬಾರಿ ಹಣ್ಣು ನೀಡುವ ಹಲಸಿನ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ತಳಿಯನ್ನು ಕೃಷಿ ಮೇಳದಲ್ಲಿ ರೈತರಿಗೆ ಮಾಹಿತಿ ನೀಡಲು ಪ್ರದರ್ಶನಕ್ಕಿಡಲಾಗಿದೆ.

‘ಭೈರಚಂದ್ರ’ ಹೆಸರಿನ ಈ ತಳಿಯು 3ರಿಂದ 4 ವರ್ಷಗಳಲ್ಲೇ ಇಳುವರಿ ನೀಡುತ್ತದೆ. ತರಕಾರಿಯಾಗಿಯೂ ಈ ಹಣ್ಣನ್ನು ಬಳಸಬಹುದು. ಈ ಹಲಸಿನ ಹಣ್ಣಿನ ತೊಳೆ ಉದ್ದವಾಗಿದೆ. ಸಕ್ಕರೆ ಅಂಶವೂ ಹೆಚ್ಚಾಗಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಸಸ್ಯ ಜೈವಿಕ ತಂತ್ರಜ್ಞಾನದ ಪ್ರಾಧ್ಯಾಪಕಿ ಡಾ. ಎಸ್‌. ಶ್ಯಾಮಲಮ್ಮ ತಿಳಿಸಿದ್ದಾರೆ.

ಕೈತೋಟದಲ್ಲೂ ಈ ತಳಿಯನ್ನು ಸುಲಭವಾಗಿ ಬೆಳೆಸಬಹುದು. ರಾಮನಗರ ಜಿಲ್ಲೆಯ ಭೈರಾ ಪಟ್ಟಣದಲ್ಲಿ ಮೊದಲ ಬಾರಿ ಈ ತಳಿಯ ಬಗ್ಗೆ ಪ್ರಯೋಗ ನಡೆಸಲಾಯಿತು. ಮೂರು ವರ್ಷಗಳ ಪ್ರಯೋಗದ ಬಳಿಕ ಈ ತಳಿಯನ್ನು ಬಿಡುಗಡೆ ಮಾಡಲಾಗಿದೆ.

ADVERTISEMENT

ನಿಯಮಿತವಾಗಿ ಏಪ್ರಿಲ್‌–ಮೇ ತಿಂಗಳಲ್ಲಿ ಈ ತಳಿ ಹಣ್ಣು ನೀಡುತ್ತದೆ. ಜತೆಗೆ, ಆಗಸ್ಟ್‌–ಸೆಪ್ಟೆಂಬರ್‌ ತಿಂಗಳಲ್ಲೂ ಈ ತಳಿಯ ಗಿಡದಿಂದ ಹಣ್ಣುಗಳು ದೊರೆಯುತ್ತವೆ. ಹಣ್ಣಿನ ಸರಾಸರಿ ತೂಕ 8.72ಕೆ.ಜಿ.

ಭೈರಚಂದ್ರ ತಳಿಯ ವೈಶಿಷ್ಟ್ಯಗಳು

l1 ಕೆ.ಜಿ. ಹಣ್ಣಿನಲ್ಲಿ 20ರಿಂದ 23 ತೊಳೆಗಳಿರುತ್ತವೆ

lಒಂದು ತೊಳೆಯ ಸರಾಸರಿ ತೂಕ 32 ಗ್ರಾಂ

lಉದ್ದ ಮತ್ತು ಅಗಲವಿರುವ ತೊಳೆಗಳು ಕೇಸರಿ ಬಣ್ಣವನ್ನು ಹೊಂದಿದ್ದು, ಮಧ್ಯಮ ಗಾತ್ರದ್ದಾಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.