ADVERTISEMENT

ಎರಡು ದಿನ ಡೆವಿಲ್ಸ್ ಟ್ರಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2011, 19:30 IST
Last Updated 23 ನವೆಂಬರ್ 2011, 19:30 IST
ಎರಡು ದಿನ ಡೆವಿಲ್ಸ್ ಟ್ರಿ
ಎರಡು ದಿನ ಡೆವಿಲ್ಸ್ ಟ್ರಿ   

ಕನ್ಸರ್ನ್ ಇಂಡಿಯಾ ಫೌಂಡೇಶನ್ ಮತ್ತು ಅಂತರಂಗ: ಗುರುವಾರ ಬೆಳಿಗ್ಗೆ 11.30 ಮತ್ತು 1 ಗಂಟೆ, ಶುಕ್ರವಾರ ಮಧ್ಯಾಹ್ನ 1.30ಕ್ಕೆ ಮಕ್ಕಳಿಗಾಗಿ `ದ ಡೆವಿಲ್ಸ್ ಟ್ರಿ~ (ಪರಿಕಲ್ಪನೆ, ನಿರ್ದೇಶನ: ಪದ್ಮಾವತಿ ರಾವ್) ನಾಟಕ.

ಮಧ್ಯ ಭಾರತದ ಜನಪದ ಕಥೆಯನ್ನು ಆಧರಿಸಿದ ಈ ನಾಟಕದಲ್ಲಿ ಮಕ್ಕಳು ಖುಷಿ ಪಡಲು ಬೇಕಾದ್ದೆಲ್ಲ ಇದೆ. ಈಗಾಗಲೆ ಇದನ್ನು ವೀಕ್ಷಿಸಿದ ಅನೇಕ ಶಾಲಾ ಮಕ್ಕಳಿಂದ ಮೆಚ್ಚುಗೆಯೂ ಸಿಕ್ಕಿದೆ.

ನಾಟಕ ಪ್ರದರ್ಶನದಿಂದ ಸಂಗ್ರಹವಾಗುವ ಹಣವನ್ನು ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ, ತರಬೇತಿ ನೀಡಿ ಸ್ವಾವಲಂಬಿಗಳಾಗಿ ಮಾಡುವ ಕನ್ಸರ್ನ್ ಇಂಡಿಯಾದ ಕಾರ್ಯಕ್ಕೆ ಬಳಕೆ ಮಾಡಲಾಗುವುದು.

ಸ್ಥಳ: ಬಾಲಭವನ, ಕಬ್ಬನ್ ಪಾರ್ಕ್. ಟಿಕೆಟ್ ಮತ್ತಿತರ ವಿವರಗಳಿಗೆ: 2530 5775, 6570

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.