ADVERTISEMENT

ಕಡಲಾಚೆ ಯಕ್ಷ ಝಲಕ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ನಮ್ಮ ನಾಡಿನ ಕಲೆ ಯಕ್ಷಗಾನ ಫಿಲಿಪೀನ್ಸ್‌ನಲ್ಲೂ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಯಿತು. ಅದೂ ಎಷ್ಯದ ನೊಬೆಲ್ ಎಂದೇ ಖ್ಯಾತವಾದ `ಮ್ಯೋಗ್ಸೆಸೆ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ.

ಕನ್ನಡ ನಾಡಿಗೆ ಖ್ಯಾತಿ ತಂದು ಕೊಟ್ಟ ಡಾ. ಹರೀಶ ಹಂದೆ ಈ ಪ್ರಶಸ್ತಿ ಫಿಲಿಫೀನ್ಸ್ ರಾಜಧಾನಿ ಮನಿಲಾಕ್ಕೆ ಹೋಗಿದ್ದರು. ಅವರೊಡನೆ ಸೆಲ್ಕೋ ಸೋಲಾರ್ ಸಂಸ್ಥೆ ಹಿರಿಯ ಅಧಿಕಾರಿ ಉತ್ತರ ಕನ್ನಡ ಕುಮಟಾದ ಮೋಹನ ಭಾಸ್ಕರ ಹೆಗಡೆಯವರೂ ಇದ್ದರು.

ಮೋಹನ್ ಬೆಂಗಳೂರಿನ ಯಕ್ಷದೇಗುಲದಲ್ಲಿ ಹಾಗೂ ಯಕ್ಷಗಾನದ ಮೇರುನಟ ಡಾ. ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ಯಕ್ಷಗಾನವನ್ನು ಕಲಿತವರು. ಇದು ಪ್ರಶಸ್ತಿ ಸಮಿತಿಯವರ ಗಮನಕ್ಕೆ ಬಂತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷಗಾನ ಪ್ರದರ್ಶಿಸಲು ಅವಕಾಶ ನೀಡಿದರು. ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿದ್ದ ಯಕ್ಷಗಾನದ ಹಾಡಿಗೆ ಸಹಜ ಉಡುಪಿನಲ್ಲಿಯೇ ಹೆಜ್ಜೆ ಹಾಕಿ ಅಭಿನಯಿಸಿದ ಮೋಹನ್ ವೀಕ್ಷಕರನ್ನು ಬೆರಗುಗೊಳಿಸಿದರು.

ಅವರ ಯಕ್ಷಗಾನ ಕಂಡು ಪುಳಕಿತರಾದವರಲ್ಲಿ ಫಿಲಿಪೀನ್ಸ್‌ನ ಸಾವಿರಕ್ಕೂ ಹೆಚ್ಚು ಗಣ್ಯರು, ಭಾರತದ ರಾಯಭಾರಿ ದೇವೇಂದ್ರಕುಮಾರ್ ಸೇರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.