ADVERTISEMENT

ವಾರಾಂತ್ಯ ಮನ್ಸೂರ್ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಬೆಂಗಳೂರು ಕಿಡ್ನಿ ಫೌಂಡೇಷನ್ (ಬಿಕೆಎಫ್) ಜೊತೆ ಬದುಕಿನ ಕೊನೆಯ ದಿನಗಳಲ್ಲಿ ನಿಕಟರಾದವರು ಭಾರತೀಯ ಸಂಗೀತದ ದಿಗ್ಗಜ ದಿ. ಮಲ್ಲಿಕಾರ್ಜುನ ಮನ್ಸೂರ್. ಮೂತ್ರ ಪಿಂಡ ಸಮಸ್ಯೆ ಚಿಕಿತ್ಸೆಗಾಗಿ ಬಿಕೆಎಫ್‌ಗೆ ಬಂದ ಅವರು ಗುಣಮುಖರಾದರು.

ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ತಮ್ಮ ಸಂಗೀತ ಕಛೇರಿ ನಡೆಸಿ ಅದರಿಂದ ಬಂದ ಹಣವನ್ನೆಲ್ಲವನ್ನೂ ಬಿಕೆಎಫ್‌ಗೆ ಅದರ ಜನ ಸೇವಾ ಕೈಂಕರ್ಯಕ್ಕೆ ಧಾರೆ ಎರೆದರು.
 ಅವರ ಕಾಲಾನಂತರದಲ್ಲಿ ಅವರದೇ ಸ್ಮರಣೆಯಲ್ಲಿ ಅಖಿಲ ಭಾರತ ಮಟ್ಟದ ಸಂಗೀತೋತ್ಸವ ನಡೆಸಲು ಅದೊಂದು ಪ್ರೇರಣೆಯಾಯಿತು.
 
ಖ್ಯಾತ ಹಿಂದೂಸ್ತಾನಿ ಕಲಾವಿದರಿಗೆ 50 ಸಾವಿರ ನಗದು, ಮನ್ಸೂರರ ಕಂಚಿನ ಪುತ್ಥಳಿ ನೀಡಿ ಗೌರವಿಸುವ ಮನ್ಸೂರ್ ಪುರಸ್ಕಾರದ ಪರಂಪರೆಗೂ ನಾಂದಿಯಾಯಿತು.
 
ಈ ವರ್ಷದ ಪುರಸ್ಕಾರಕ್ಕೆ ಹಿರಿಯ ಗಾಯಕ, ಕೋಲ್ಕತ್ತದ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಹಿರಿಯ ಸಂಗೀತ ಗುರು ಪಂಡಿತ್ ಉಲ್ಲಾಸ್ ಕಶಲ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಗೀತೋತ್ಸವದಲ್ಲಿ ಶನಿವಾರ ಸಂಜೆ 5.45ಕ್ಕೆ ಸುಗತೋ ಭಾದುರಿ (ಹಿಂದುಸ್ತಾನಿ ಶೈಲಿಯಲ್ಲಿ ಮ್ಯೋಂಡೋಲಿನ್), 7.30ರಿಂದ ಸನ್ಮಾನ, ಪ್ರಶಸ್ತಿ ಪ್ರದಾನ, ನಂತರ ಉಲ್ಲಾಸ್ ಕಶಲ್ಕರ್‌ರಿಂದ ಗಾಯನ.

ಭಾನುವಾರ ಸಂಜೆ 6ಕ್ಕೆ  ಗಣಪತಿ ಭಟ್ ಹಾಸಣಗಿಯವರ ಗಾಯನ. ನಂತರ ಮಾಲಿನಿ ರಾಜೂರ್ಕರ್‌ರಿಂದ ಹಾಡುಗಾರಿಕೆ. ಪಕ್ಕ ವಾದ್ಯದಲ್ಲಿ  ಅರವಿಂದ ಥಟ್ಟೆ,  ರವೀಂದ್ರ ಕಾಟೋಟಿ, ಉಮಾಕಾಂತ ಪುರಾಣಿಕ (ಹಾರ್ಮೋನಿಯಂ) ಗುರುಚರಣ್ ಗರುಡ, ಗುರುಮೂರ್ತಿ ವೈದ್ಯ, ಸುಹಾಸ್ ಶಾಸ್ತ್ರಿ (ತಬಲಾ).
 
ಒಂದೊಂದು ದಿನ ಇಬ್ಬರು ಕಲಾವಿದರ ಕಛೇರಿ. ಆಯಾ ದಿನಕ್ಕೆ ಪ್ರವೇಶ ದರ 49 ರೂ. ಇದರಿಂದ ಸಂಗ್ರಹವಾಗುವ ಹಣವನ್ನು ಕಿಡ್ನಿ ಪ್ರತಿಷ್ಠಾನ ಬಡ ಅರ್ಹ ರೋಗಿಗಳ ಉಚಿತ ಡಯಲಿಸಿಸ್‌ಗೆ ವಿನಿಯೋಗಿಸುತ್ತದೆ. 
 
ಟಿಕೆಟ್ ಸಿಗುವ ಸ್ಥಳ: ಎಂ ಜಿ ರಸ್ತೆ ಕೆ.ಸಿ. ದಾಸ್ (2558 7003); ಜಯನಗರ 3ನೇ ಬ್ಲಾಕ್ ಕೆಲಿಪ್ರೋ (2245 2368); ಜಯನಗರ 7ನೇ ಬ್ಲಾಕ್ ಚಾನೆಲ್-9; ಲ್ಯಾಂಡ್ ಮಾರ್ಕ್, ಫೋರಂ  ಮಾಲ್ (4240 4240) ಹಾಗೂ ಬಿಕೆಎಫ್ ಆಡಳಿತ ಕಚೇರಿ (2666 4900). ಮಾಹಿತಿಗೆ: ಗುರುಪ್ರಸಾದ್ 98454 24053.  ಜ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.