ADVERTISEMENT

‘ಬಟನ್‌ ಜುವೆಲ್ಲರಿ’ಯ ಮೋಹಕ ನೋಟ

ವಿದ್ಯಾಶ್ರೀ ಗಾಣಿಗೇರ
Published 7 ಸೆಪ್ಟೆಂಬರ್ 2018, 19:30 IST
Last Updated 7 ಸೆಪ್ಟೆಂಬರ್ 2018, 19:30 IST
ಬಟನ್‌ ಜುವೆಲ್ಲರಿ
ಬಟನ್‌ ಜುವೆಲ್ಲರಿ   

ದಿ ನನಿತ್ಯದ ಬಳಕೆಗೆ ಬಂಗಾರದ ಕಿವಿಯೋಲೆ, ಉಂಗುರ, ಚೈನ್‌, ಬ್ರೇಸ್‌ಲೆಟ್‌ ಹೀಗೆ ಪ್ರತಿದಿನ ಒಂದೇ ರೀತಿಯ ಒಡವೆಗಳನ್ನು ಧರಿಸಲು ಇಷ್ಟಪಡದ ಹುಡುಗಿಯರಿಗೆ ಬಟನ್‌ ಜ್ಯುವೆಲ್ಲರಿ ನೆಚ್ಚಿನ ಆಯ್ಕೆ.ಪ್ರತಿದಿನ ಹಾಕುವ ಉಡುಪುಗಳಿಗೆ ತಕ್ಕಂತೆಕ್ಲಾಸಿ, ಟ್ರೆಂಡಿಯಾಗಿರುವಈ ಬಟನ್‌ ಜ್ಯುವೆಲ್ಲರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಈ ಆಭರಣಗಳು ಎಲ್ಲ ಋತುಮಾನದಲ್ಲಿ, ಎಲ್ಲರಿಗೂ ಒಪ್ಪುವಂತಹದ್ದಾಗಿದೆ. ಇದು ವಿದೇಶಗಳಲ್ಲಿಯೂ ಟ್ರೆಂಡ್‌ ಆಗಿದೆ.ಕಾಲೇಜು ಹುಡುಗಿಯರಿಗೆ, ಯುವತಿಯರಿಗೆ ಸರಳವಾಗಿ ಫ್ಯಾಷನೆಬಲ್ಲಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ. ಹೀಗಾಗಿ ತೊಡುವ ಬಟ್ಟೆ,ಹೇರ್‌ಸ್ಟೈಲ್‌,ಕಿವಿಯೋಲೆಗಳಲ್ಲಿ ಹಲವಾರು ಕಸರತ್ತುಗಳನ್ನು ಮಾಡುತ್ತಾರೆ.ಇಂಥವರಿಗೆ ಬಟನ್‌ ಜುವೆಲ್ಲರಿ ಹೇಳಿ ಮಾಡಿಸಿದ್ದು.

ಡ್ರೆಸ್‌ನ ಅಂದ ಹೆಚ್ಚಿಸೋ ಗುಂಡಿಗಳೇ ಈ ಜ್ಯುವೆಲ್ಲರಿಗಳಲ್ಲಿ ಕತ್ತು, ಕಿವಿ, ಕೈಯನ್ನು ಅಲಂಕರಿಸುತ್ತವೆ. ಬಣ್ಣ ಬಣ್ಣದ ಖಾಲಿ ಗುಂಡಿಗಳ ಮೇಲೆ ಹೂವಿನ ಚಿತ್ತಾರ ಹಾಗೂ ಮಣಿಗಳ ಅಲಂಕಾರಗಳಿಂದ ಈ ಒಡವೆಗಳು ಆಕರ್ಷಕವಾಗಿವೆ. ಟೀ– ಶರ್ಟ್‌, ಕುರ್ತಾ, ಚೂಡಿದಾರ್‌ಗಳಿಗೂ ಈ ಒಡವೆಗಳು ಸೈ. ಹಾಗೇ ಕಾಟನ್‌, ಕಲಂಕಾರಿ ಸೀರೆಗಳಿಗೂ ಬಟನ್‌ನ ದಪ್ಪ ಮಣಿಸರ ಹಾಗೂ ಹ್ಯಾಂಗಿಂಗ್ಸ್‌ ತೊಟ್ಟರೆ ಚಂದ ಕಾಣುತ್ತದೆ.

ADVERTISEMENT

ಬಟನ್‌ ಒಡವೆಗಳಲ್ಲಿ ಕಿವಿಯೋಲೆ, ಹ್ಯಾಂಗಿಂಗ್ಸ್‌, ಬ್ರೇಸ್‌ಲೆಟ್‌, ಸರ, ನೆಕ್ಲೇಸ್‌ ಲಭ್ಯ.ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಇವುಗಳನ್ನು ಧರಿಸಬಹುದಾಗಿದೆ. ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಈ ಕಿವಿಯೋಲೆಗಳನ್ನು ಧರಿಸಬೇಕು. ವೈವಿಧ್ಯ ಹಾಗೂ ವಿನ್ಯಾಸಗಳಿಂದ ಈ ಕಿವಿಯೋಲೆ, ಸರಗಳು ಇಷ್ಟವಾಗುವಂತಿವೆ. ಮ್ಯಾಚಿಂಗ್‌ ಖಯಾಲಿ ಇರುವವರಿಗೆ ಈ ಒಡವೆಗಳು ಸೂಕ್ತ.

ಈ ಒಡವೆಗಳ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಿದೆ ಎನ್ನುವವರು ತಲೆಕೆಡಿಸಿಕೊಳ್ಳಬೇಕಿಲ್ಲ. ಮನೆಯಲ್ಲಿಯೇ ಇವುಗಳನ್ನು ಸುಲಭವಾಗಿ ತಯಾರಿಸಬಹುದು. ಯೂಟ್ಯೂಬ್‌ನಲ್ಲಿ ಹುಡುಕಾಡಿದರೆ ಬಟನ್‌ ಜ್ಯುವೆಲ್ಲರಿ ಮಾಡುವ ನೂರಾರು ಆಯ್ಕೆಗಳ ಕೊಂಡಿಗಳು ಸಿಗುತ್ತವೆ. ಕಡಿಮೆ ಖರ್ಚಿನಲ್ಲಿ ತಯಾರಿಸಬಹುದು.

ಈ ಒಡವೆಗಳಲ್ಲಿ ದೊಡ್ಡ, ವಿಭಿನ್ನ ಬಣ್ಣಗಳ ಗುಂಡಿಗಳು ಆಭರಣವಾಗಿ ಗಮನ ಸೆಳೆಯುತ್ತವೆ.ಕೆಲವು ಡ್ರೆಸ್‌ಗಳಿಗೆ ಮಿಸ್‌ ಮ್ಯಾಚ್‌ ಮಾಡಿ ತೊಟ್ಟರೂ ಇದು ಚೆಂದ ಕಾಣುತ್ತದೆ. ಬೇರೆಯವರಿಗಿಂತ ವಿಭಿನ್ನವಾಗಿ ಕಾಣಬೇಕೆನ್ನುವರು ಇದನ್ನು ಟ್ರೈ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.