ADVERTISEMENT

ಶಾಂತಾರಾಮ ಆಚಾರ್ಯಗೆ ‘ಯಕ್ಷದೇಗುಲ’ ಸನ್ಮಾನ

Yakshagana

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 19:45 IST
Last Updated 11 ಫೆಬ್ರುವರಿ 2019, 19:45 IST
ಶಾಂತರಾಮ ಆಚಾರ್ಯ
ಶಾಂತರಾಮ ಆಚಾರ್ಯ   

ಯಕ್ಷದೇಗುಲ ಸಂಸ್ಥೆ ರಾಜಧಾನಿಯಲ್ಲಿ ನಾಲ್ಕು ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಹೆಸರಾಗಿದೆ. ಸಂಸ್ಥೆಯ ‘ಯಕ್ಷದೇಗುಲ’ ಸನ್ಮಾನಕ್ಕೆ ಹಿರಿಯ ಯಕ್ಷಗಾನ ಪ್ರಸಾದನ ಕಲಾವಿದ ಬ್ರಹ್ಮಾವರದ ಶಾಂತಾರಾಮ ಆಚಾರ್ಯ (ಮರಿ ಆಚಾರ್) ಆಯ್ಕೆಯಾಗಿದ್ದಾರೆ.

ಫೆ. 17ರಂದು ಸಂಜೆ 6ಕ್ಕೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ, ಆಡಳಿತ ಮತ್ತು ಹಣಕಾಸು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಶೇರುಗಾರ, ವಿದ್ವಾಂಸ ಡಾ.ಆನಂದರಾಮ ಉಪಾಧ್ಯ, ಕೆ.ಪುರುಷೋತ್ತಮ ಅಡಿಗ ಅವರ ಉಪಸ್ಥಿತಿಯಲ್ಲಿ ಶಾಂತಾರಾಮ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು. ಕೀರಿಕ್ಕಾಡು ವಿಷ್ಣುಭಟ್ ರಚಿಸಿರುವ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ನಿರ್ದೇಶನ ಕೆ. ಮೋಹನ್. ಕಲಾವಿದರಾಗಿ ಲಂಬೋದರ ಹೆಗಡೆ, ದೇವರಾಜದಾಸ್, ಗಣಪತಿ ಭಟ್, ಮಾಧವ, ಮಂಜುನಾಥ ಭಟ್, ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಉಪ್ಪುಂದ ಗಣೇಶ್, ಪ್ರಶಾಂತ್ ಹೆಗಡೆ, ಮನೋಜ್ ಭಟ್, ನರಸಿಂಹ ತುಂಗ, ಉದಯ ಬೋವಿ, ನವೀನ್ ಮತ್ತಿತರರು ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT