ADVERTISEMENT

ಆ್ಯನೆ ಫ್ರಾಂಕ್ ಡೈರಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2013, 19:59 IST
Last Updated 16 ಫೆಬ್ರುವರಿ 2013, 19:59 IST
ಆ್ಯನೆ ಫ್ರಾಂಕ್ ಡೈರಿ
ಆ್ಯನೆ ಫ್ರಾಂಕ್ ಡೈರಿ   

ಆ್ಯನೆ ಫ್ರಾಂಕ್ ಯಾರು?
ಜರ್ಮನ್ ಹುಡುಗಿ ಆ್ಯನೆ ಫ್ರಾಂಕ್. ಎರಡನೇ ವಿಶ್ವಯುದ್ಧ ನಡೆದಾಗ ನಾಜಿಗಳಿಂದ ತಪ್ಪಿಸಿಕೊಂಡು, ಅವಳ ಕುಟುಂಬದವರು ಹಾಗೂ ಸ್ನೇಹಿತರು ಬಚ್ಚಿಟ್ಟುಕೊಂಡಿದ್ದರು. ಎಂಟು ಜನ ಅವಿತುಕೊಂಡಿದ್ದಾಗಲೂ ಅವಳು ತನ್ನ ಡೈರಿ ಇಟ್ಟುಕೊಂಡಿದ್ದಳು.

ಅವರು ಬಚ್ಚಿಟ್ಟುಕೊಂಡಿದ್ದು ಏಕೆ?
ಅವರು ಯಹೂದಿಗಳಾಗಿದ್ದರು. ನಾಜಿಗಳು ಯಹೂದಿಗಳನ್ನು ಹಿಡಿದು ಸೇನೆಗೆ ಸೇರಿಸುತ್ತಿದ್ದರು. ಆ್ಯನೆ ಕುಟುಂಬದವರು ಹಾಗೂ ಸ್ನೇಹಿತರಿಗೆ ಸೇನೆ ಸೇರುವುದು ಬೇಕಿರಲಿಲ್ಲ. ಅದಕ್ಕೇ ಅವರು ತಲೆಮರೆಸಿಕೊಂಡಿದ್ದರು.

ಅವರು ಎಲ್ಲಿ ಅವಿತಿದ್ದರು?
ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಆ್ಯನೆ ತಂದೆಯ ಸಾಂಬಾರ ಪದಾರ್ಥಗಳ ಕಾರ್ಖಾನೆ ಇತ್ತು. ಅದರ ಅಟ್ಟದ ಮೇಲೆ ಎಲ್ಲರೂ ಅವಿತಿದ್ದರು. ಆಗ ತನಗಾದ ಅನುಭವಗಳನ್ನು ಆ್ಯನೆ ಡೈರಿಯಲ್ಲಿ ಬರೆದಿಡುತ್ತಿದ್ದಳು. ಒಂದು ಪುಟದಲ್ಲಿ ಅವಳು, `ಎಲ್ಲ ನೋವುಗಳ ನಡುವೆಯೂ ಜನ ಹೃದಯದಿಂದ ಒಳ್ಳೆಯವರೇ ಎಂದು ಈಗಲೂ ನಂಬಿದ್ದೇನೆ' ಎಂದು ಬರೆದಿದ್ದಳು.

ಅವರೆಲ್ಲಾ ಎಷ್ಟು ಕಾಲ ಬಚ್ಚಿಟ್ಟುಕೊಂಡಿದ್ದರು?
ಎರಡು ವರ್ಷ. ಜುಲೈ 1942ರಿಂದ ಆಗಸ್ಟ್ 1944ರವರೆಗೆ ಅಲ್ಲಿದ್ದರು. ಆಮೇಲೆ ಯಾರೋ ನಾಜಿಗಳಿಗೆ ಅವರ ಅಡಗುತಾಣದ ಸುಳಿವು ನೀಡಿದರು. ಅವರೆಲ್ಲರನ್ನು ನಾಜಿಗಳು ಬಂಧಿಸಿದರು. 1945ರಲ್ಲಿ ಸೇನಾ ಶಿಬಿರದಲ್ಲಿ ಆ್ಯನೆ ಮೃತಪಟ್ಟಳು. ಆಗ ಅವಳ ವಯಸ್ಸು 15 ವರ್ಷವಷ್ಟೆ. ಶಿಬಿರದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಅವಳ ತಂದೆ ಒಟ್ಟೊ.

ADVERTISEMENT

ಅವಳ ಡೈರಿ ಪ್ರಕಟವಾದದ್ದು ಯಾವಾಗ?
1947ರಲ್ಲಿ ಅದು ಮೊದಲು ಪ್ರಕಟವಾಯಿತು. ಆಮೇಲೆ ಅದನ್ನು ನಾಟಕಕ್ಕೆ ಹಾಗೂ ಸಿನಿಮಾಗೆ ಒಗ್ಗಿಸಿದರು. ನಾಟಕ ಹಾಗೂ ಸಿನಿಮಾದ ಶೀರ್ಷಿಕೆ `ದಿ ಡೈರಿ ಆಫ್ ಆ್ಯನೆ ಫ್ರಾಂಕ್'. ಅದು ಸಾಕಷ್ಟು ಜನಪ್ರಿಯವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.